ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ 52 ನೇ ವಯಸ್ಸಿನಲ್ಲಿಯೂ ಬ್ಯಾಚುಲರ್ ಅಗಿಯೇ ಉಳಿದುಕೊಂಡಿದ್ದಾರೆ.
ಮುಂಬೈ (ಜ.07): ಬಾಲಿವುಡ್ ನಟ ಸಲ್ಮಾನ್ ಖಾನ್ 52 ನೇ ವಯಸ್ಸಿನಲ್ಲಿಯೂ ಬ್ಯಾಚುಲರ್ ಅಗಿಯೇ ಉಳಿದುಕೊಂಡಿದ್ದಾರೆ.
ಸಲ್ಲು ಮದುವೆ ಬಗ್ಗೆ ಮಾತೇ ಆಡುತ್ತಿಲ್ಲ. ಬಾಲಿವುಡ್ ನಟಿ ರಾಣಿ ಮುಖರ್ಜಿ ಇದೀಗ ಸಲ್ಲು ಮದುವೆ ಬಗ್ಗೆ ಮಾತನಾಡಿದ್ದಾರೆ. ನಾವು ಸಲ್ಮಾನ್ ಖಾನ್ ಅವರ ಮಕ್ಕಳನ್ನು ನೋಡಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿಗೆ ನಡೆದ ಹಿಂದಿ ಬಿಗ್'ಬಾಸ್ ಕಾರ್ಯಕ್ರಮದಲ್ಲಿ ತಮ್ಮ ಚಿತ್ರದ ಪ್ರಮೋಷನ್'ಗೆ ರಾಣಿ ಮುಖರ್ಜಿ ಆಗಮಿಸಿದ್ದರು. ಬಿಗ್'ಬಾಸ್ ವೇದಿಕೆಯಲ್ಲಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಈ ಜೋಡಿ ಸಾಂಗ್'ವೊಂದಕ್ಕೆ ಜತೆಯಾಗಿಯೇ ಸ್ಟೆಪ್ ಹಾಕಿದೆ. ವೇದಿಕೆಯ ಮೇಲೆ ಸಲ್ಮಾನ್'ಗೆ ಪ್ರಶ್ನೆಯೊಂದನ್ನು ಕೇಳಿದ ರಾಣಿ, ನೀವು ಯಾವಾಗ ಮಗುವನ್ನು ಪಡೆಯುವುದು ? ನಮಗೆ ಸಲ್ಮಾನ್ ಖಾನ್ ಮಕ್ಕಳು ಬೇಕು. ನಿಮ್ಮ ಮದುವೆಯಲ್ಲಿ ನಮಗೆ ಇಂಟ್ರೆಸ್ಟ್ ಇಲ್ಲ. ಆದರೆ, ನಿಮ್ಮ ಮಕ್ಕಳನ್ನು ನೋಡಲು ಇಷ್ಟವಿದೆ. ನೀವು ಮಕ್ಕಳನ್ನು ಪಡೆಯಲೇಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಲ್ಮಾನ್, ನನಗೂ ಕೂಡ ಮದುವೆಯಲ್ಲಿ ಆಸಕ್ತಿಯಿಲ್ಲ ಎಂದು ಮಕ್ಕಳ ವಿಷಯಕ್ಕೆ ಪ್ರತಿಕ್ರಿಯಿಸಿಲ್ಲ.
