ನೇರ ಅವನ ಮನೆಗೇ ಹೋಗಿ ಗಂಟೆಗಟ್ಟಲೆ ಕುಳಿತು, ಟೀ- ಬಿಸ್ಕತ್ತು ಸೇವಿಸಿ ವಾಪಸು ಬರುತ್ತಾಳೆ!

ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂ ಅಂದ್ರೆ ಯಾರಿಗಾದರೂ ಒಮ್ಮೆ ನಡುಕ ಹುಟ್ಟುತ್ತೆ. ಆದರೆ, ಇಲ್ಲೊಬ್ಬಳು ನಟಿ ಆತನ ಹೆಸರನ್ನು ಕೇಳಿ ಕಂಪಿಸುವುದಿಲ್ಲ! ನೇರ ಅವನ ಮನೆಗೇ ಹೋಗಿ ಗಂಟೆಗಟ್ಟಲೆ ಕುಳಿತು, ಟೀ- ಬಿಸ್ಕತ್ತು ಸೇವಿಸಿ ವಾಪಸು ಬರುತ್ತಾಳೆ!

ಇಲ್ಲಿ ಆ ಧೈರ್ಯಗಿತ್ತಿ ಶ್ರದ್ಧಾ ಕಪೂರ್. ದಾವೂದ್ ಇಬ್ರಾಹಿಂ ಅವರ ಕುಟುಂಬ ಮುಂಬೈನಲ್ಲಿ ವಾಸವಿದ್ದು, ಶ್ರದ್ಧಾ ಅವರನ್ನೆಲ್ಲ ಭೇಟಿಯಾಗಿ ಬಂದಿದ್ದಾರೆ. ಇದಕ್ಕೆ ಕಾರಣವೂ ಇದೆ. ದಾವೂದ್ ಇಬ್ರಾಹಿಂ ಅವರ ಸೋದರಿ ಹಸೀನಾ ಬದುಕಿನ ಮೇಲೆ ಬಯೋಪಿಕ್ ಬರುತ್ತಿದೆ ಅನ್ನೋದು ಗೊತ್ತೇ ಇದೆ. ಆ ಪಾತ್ರವನ್ನು ಶ್ರದ್ಧಾ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಭರದಿಂದ ಸಾಗಿದ್ದು, ಶೂಟಿಂಗ್ ಸ್ಪಾಟ್‌ಗೂ ದಾವೂದ್ ಕುಟುಂಬಸ್ಥರು ಭೇಟಿ ಕೊಟ್ಟು ಶ್ರದ್ಧಾಗೆ ಸಲಹೆಗಳನ್ನು ಕೊಟ್ಟಿದ್ದಾರಂತೆ. ವಿಶೇಷವಾಗಿ ಹಸೀನಾ ಅವರ ಮೂಗುತಿಯ ಮೇಲೆ ಒಂದಿಷ್ಟು ರೋಚಕ ಕತೆಗಳನ್ನು ಶ್ರದ್ಧಾ ಕೇಳಿದ್ದಾರೆ. ಅಪೂರ್ವ ಲಾಖಿಯಾ ನಿರ್ದೇಶಿಸುತ್ತಿರುವ ‘ಹಸೀನಾ: ದಿ ಕ್ವೀನ್ ಆ್ ಮುಂಬೈ’ 2017ರ ಮಧ್ಯದಲ್ಲಿ ತೆರೆಕಾಣಲಿದೆ.