ಸಾಮಾನ್ಯವಾಗಿ ನನ್ನ ಬಗ್ಗೆ ಏನೇ ಬರೆದರೂ ನಾನದಕ್ಕೆ ಪ್ರತಿಕ್ರಿಯಿಸುವುದಿಲ್ಲ, ಆದರೆ ನನ್ನ ಮೃತ ತಾಯಿಯ ಬಗ್ಗೆ ಈ ರೀತಿ ಬರೆದಿರುವುದು ಅಸಹ್ಯಕರ ಮತ್ತು ಅಸಂವೇದನೀಯ ಅಂತಾ ಅರ್ಜುನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಮುಂಬೈ(ನ.30): ಬಾಲಿವುಡ್ ನಟ ಅರ್ಜುನ್ ಕಪೂರ್ ಹಿಂದಿ ಪತ್ರಿಕೆಯೊಂದರ ಮೇಲೆ ಗರಂ ಆಗಿದ್ದಾರೆ. 2 ಸ್ಟೇಟ್ಸ್ ಚಿತ್ರದಲ್ಲಿ ಅರ್ಜುನ್ ಕಪೂರ್ ತಾಯಿಯಾಗಿ ಅಮೃತಾ ಸಿಂಗ್ ಅಭಿನಯಿಸಿದ್ದರು. ಅರ್ಜುನ್ ಅಭಿನಯದ ಮುಬಾರಕನ್’ ಚಿತ್ರದಲ್ಲೂ ಅಮೃತಾ ತಾಯಿಯ ಪಾತ್ರ ಮಾಡಬೇಕಿತ್ತು. ಆದರೆ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಅಮೃತಾ ‘ಮುಬಾರಕನ್’ ಚಿತ್ರದಿಂದ ಹೊರನಡೆದಿದ್ದಾರೆ.
ಇದನ್ನೇ ಪತ್ರಿಕೆಯ ಹೆಡ್ ಲೈನ್'ನಲ್ಲಿ ಪಂಚಿಂಗ್ ಆಗಿ ಬರೆಯಲಾಗಿತ್ತು. ಆದರೆ ವರದಿಯನ್ನು ಪೂರ್ತಿಯಾಗಿ ಓದದೇ, ತಮ್ಮ ತಾಯಿಯ ಬಗ್ಗೆ ಬರೆದಿದ್ದಾರೆ ಎಂದುಕೊಂಡ ಅರ್ಜುನ್ ಕಪೂರ್ ಕೋಪಗೊಂಡಿದ್ದಾರೆ. ಸಾಮಾನ್ಯವಾಗಿ ನನ್ನ ಬಗ್ಗೆ ಏನೇ ಬರೆದರೂ ನಾನದಕ್ಕೆ ಪ್ರತಿಕ್ರಿಯಿಸುವುದಿಲ್ಲ, ಆದರೆ ನನ್ನ ಮೃತ ತಾಯಿಯ ಬಗ್ಗೆ ಈ ರೀತಿ ಬರೆದಿರುವುದು ಅಸಹ್ಯಕರ ಮತ್ತು ಅಸಂವೇದನೀಯ ಅಂತಾ ಅರ್ಜುನ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
