Asianet Suvarna News Asianet Suvarna News

39 ರಲ್ಲೂ ಹರೆಯದ ಮೈಮಾಟ; ಮಾದಕ ಚೆಲುವೆ ಬಿಪಾಶ ಫಿಟ್ನೆಸ್ ಗುಟ್ಟೇನು?

ವಯಸ್ಸು ಮೂವತ್ತೊಂಭತ್ತಾದರೂ ಹದಿಹರೆಯದ ಮೈಮಾಟ. ದೈಹಿಕವಾಗಿ ಫಿಟ್ ಆಗಿರೋ ಕಾರಣ ಉತ್ಸಾಹ, ಲವಲವಿಕೆಯ ಬುಗ್ಗೆ. ತಾನೊಬ್ಳೇ  ಫಿಟ್ ಆಗಿದ್ರೆ ಸಾಲದು, ಎಲ್ಲರೂ ಹೆಲ್ದೀಯಾಗಿ ಫಿಟ್ ಆಗಿ ಇರಬೇಕು ಅಂತ ಬಯಸೋ ಈ ಸುಂದ್ರಿ  ಬಿಪಾಶಾ ಬಸು. ಈಕೆಯ ಲವ್ ಯುವರ್‌ಸೆಲ್ಫ್ ಅನ್ನೋ ಫಿಟ್‌ನೆಸ್ ವೀಡಿಯೋ ಯೂಟ್ಯೂಬ್ನಲ್ಲಿದೆ. ಈ ಮಾದಕ ಚೆಲುವೆಯ ಡಯೆಟ್, ಫಿಟ್ ನೆಸ್ ರಹಸ್ಯ ಇಲ್ಲಿದೆ.

Bipasha Basu Fitness Secret

ವಯಸ್ಸು ಮೂವತ್ತೊಂಭತ್ತಾದರೂ ಹದಿಹರೆಯದ ಮೈಮಾಟ. ದೈಹಿಕವಾಗಿ ಫಿಟ್ ಆಗಿರೋ ಕಾರಣ ಉತ್ಸಾಹ, ಲವಲವಿಕೆಯ ಬುಗ್ಗೆ. ತಾನೊಬ್ಳೇ  ಫಿಟ್ ಆಗಿದ್ರೆ ಸಾಲದು, ಎಲ್ಲರೂ ಹೆಲ್ದೀಯಾಗಿ ಫಿಟ್ ಆಗಿ ಇರಬೇಕು ಅಂತ ಬಯಸೋ ಈ ಸುಂದ್ರಿ  ಬಿಪಾಶಾ ಬಸು. ಈಕೆಯ ಲವ್ ಯುವರ್‌ಸೆಲ್ಫ್ ಅನ್ನೋ ಫಿಟ್‌ನೆಸ್ ವೀಡಿಯೋ ಯೂಟ್ಯೂಬ್ ನಲ್ಲಿದೆ. ಈ ಮಾದಕ ಚೆಲುವೆಯ ಡಯೆಟ್, ಫಿಟ್ ನೆಸ್ ರಹಸ್ಯ ಇಲ್ಲಿದೆ.

ಡಯೆಟ್: 
ಈ ಬೆಂಗಾಲಿ ಬ್ಯೂಟಿ ಡಯೆಟ್ ವಿಷಯದಲ್ಲಿ ರಾಜಿಯಾಗೋದು ಕಡಿಮೆ. ಬೆಳಗ್ಗೆ ಎದ್ದು ಫ್ರೆಶ್ ಆದ ಮೇಲೆ ಬಿಸಿನೀರಿಗೆ ಲಿಂಬೆರಸ ಸೇರಿಸಿ ಸೇವಿಸುತ್ತಾರೆ. ಜೊತೆಗೆ ರಾತ್ರಿ ನೆನೆಹಾಕಿದ ಬಾದಾಮಿ ತಿನ್ತಾರೆ. ಇದಾಗಿ ಸ್ವಲ್ಪ ಹೊತ್ತಿಗೆ 1 ಕಪ್ ಟೀ ಕುಡೀತಾರೆ. 6 ಎಗ್‌ವೈಟ್, ಟೋಸ್ಟ್, ಮಶ್ರೂಮ್, ಜೊತೆಗೆ ಸ್ಕಿಮ್ಡ್ ಹಾಲು ಕುಡೀತಾರೆ. ಬೆಳ್ಳಂಬೆಳಗೆ ಹಣ್ಣು ತಿನ್ನೋ ಖಯಾಲಿನೂ ಇದೆ. ಮಧ್ಯಾಹ್ನ 2 ಸೋಯಾ ಚಪಾತಿ ಜೊತೆಗೆ ದಾಲ್, ತರಕಾರಿ, ಮೀನು, ಗ್ರಿಲ್ಡ್ ಚಿಕನ್. ಅನ್ನ  ತಿನ್ನೋದ್ರಿಂದ ದೂರ. ರಾತ್ರಿಗೆ ಚೂರೇ ಚೂರು ಸ್ವೀಟು, ಹಣ್ಣು, ತರಕಾರಿ ಇಷ್ಟೇ. ನಡು ನಡುವೆ ಬಾಯಿ ಚಪಲಕ್ಕೆ ಏನೇ ತಿಂದ್ರೂ ಲಿಮಿಟ್‌ಅನ್ನು ಮೀರಲ್ಲ.

ವರ್ಕೌಟ್  

ಇಡೀ ವಾರಕ್ಕೆ ವರ್ಕೌಟ್  ಚಾರ್ಟ್ ಮಾಡಿಕೊಂಡು ಅದರಂತೆ  ವ್ಯಾಯಾಮ ಮಾಡುತ್ತಾರೆ. ಸೋಮವಾರ ಅಪ್ಪರ್ ಬಾಡಿ ವರ್ಕೌಟ್, ಮಂಗಳವಾರ ಆ್ಯಬ್ಸ್ ವರ್ಕೌಟ್, ಬುಧವಾರ ಕಾಲು ಮತ್ತು ಲೋವರ್ ಬಾಡಿ ಎಕ್ಸರ್‌ಸೈಸ್, ಗುರುವಾರ ದೇಹದ ಶೇಪ್‌ಗೆ ಸಹಕಾರಿಯಾಗುವ ವ್ಯಾಯಾಮಗಳು..ಹೀಗೆ. ಭಾನುವಾರ ಮಾತ್ರ ಏನೂ ಮಾಡಲ್ಲ, ಫುಲ್ ಡೇ ಫ್ರೀ. ಇದಲ್ಲದೇ ನಿತ್ಯ ಯೋಗ ಮಾಡ್ತಾರೆ. ಅರ್ಧಗಂಟೆ ಟ್ರೆಡ್‌ಮಿಲ್‌ನಲ್ಲಿ ಓಡ್ತಾರೆ.

ಫಿಟ್‌ನೆಸ್‌ಗೆ ಬಿಪಾಷಾ ನೀಡುವ ಟಿಪ್ಸ್

ನಿಮಗೆ ನೀವೇ ಫಿಟ್‌ನೆಸ್ ಚಾರ್ಟ್ ರೆಡಿ ಮಾಡ್ಕೊಳ್ಳಿ, ಅದನ್ನೇ ಪಾಲಿಸಿ.
 
ದಯವಿಟ್ಟು ಸಣ್ಣಗಾಗಲು, ಫಿಟ್‌ನೆಸ್‌ಗೆ ಯಾವುದೇ ಮಾತ್ರೆಯ ಮೊರೆ ಹೋಗಬೇಡಿ. ಅದರ ಬದಲು ಕಷ್ಟವಾದರೂ ವ್ಯಾಯಾಮ ಮಾಡಿ ಮೈ ಇಳಿಸಿ.

ಚೆನ್ನಾಗಿ ನೀರು ಕುಡೀರಿ. ದಿನವಿಡೀ ಆರೋಗ್ಯಕರ ಆಹಾರವನ್ನೇ ತಿನ್ನಿ.

ಫಿಟ್‌ನೆಸ್ ಗೋಲ್ ಸೆಟ್ ಮಾಡಿ, ಆಗಾಗ ಇದರಲ್ಲಿ ಬದಲಾವಣೆ ತರುತ್ತಿರಿ.

ಯಾವ ಕಾರಣಕ್ಕೂ ಜಂಕ್ ಫುಡ್ ತಿನ್ನಲೇ ಬೇಡಿ.  

Follow Us:
Download App:
  • android
  • ios