ಬಿಗ್ ಬಾಸ್ ಖ್ಯಾತಿಯ ಚಂದ್ರಿಕಾ ಈಗೇನು ಮಾಡ್ತಾ ಇದ್ದಾರೆ?

entertainment | Monday, May 7th, 2018
Shrilakshmi Shri
Highlights

ನೀವೇ ಹೇಳಿ, ನಾನ್ಯಾರಿಗೆ ಕಮ್ಮಿ ಇದ್ದೇನೆ?  ಗ್ಲಾಮರಸ್ ನಟಿ, ‘ಅಮರ ಪ್ರೇಮ'ದ ಚೆಲುವೆ ಚಂದ್ರಿಕಾ, ತಮ್ಮ ಮೋಹಕ ಸೌಂದರ್ಯದ ಅಗ್ನಿ ಪರೀಕ್ಷೆಗೆ ಹೀಗೊಂದು ಪ್ರಶ್ನೆಯಿಟ್ಟು ನಕ್ಕರು. ಮಂಡಿ ತೋರಿಸುತ್ತಿದ್ದ ನೀಲಿ ಬಣ್ಣದ ಸ್ಕರ್ಟ್, ಅವರ ಶ್ವೇತ ಸೌಂದರ್ಯ ಮತ್ತಷ್ಟು ಮಿನುಗುವಂತೆ ಮಾಡಿತು.

ನೀವೇ ಹೇಳಿ, ನಾನ್ಯಾರಿಗೆ ಕಮ್ಮಿ ಇದ್ದೇನೆ?

ಗ್ಲಾಮರಸ್ ನಟಿ, ‘ಅಮರ ಪ್ರೇಮ'ದ ಚೆಲುವೆ ಚಂದ್ರಿಕಾ, ತಮ್ಮ ಮೋಹಕ ಸೌಂದರ್ಯದ ಅಗ್ನಿ ಪರೀಕ್ಷೆಗೆ ಹೀಗೊಂದು ಪ್ರಶ್ನೆಯಿಟ್ಟು ನಕ್ಕರು. ಮಂಡಿ ತೋರಿಸುತ್ತಿದ್ದ ನೀಲಿ ಬಣ್ಣದ ಸ್ಕರ್ಟ್, ಅವರ ಶ್ವೇತ ಸೌಂದರ್ಯ ಮತ್ತಷ್ಟು ಮಿನುಗುವಂತೆ ಮಾಡಿತು. ‘ನಾನ್ಯಾರಿಗೆ ಕಮ್ಮಿ ಇದ್ದೇನೆ ಹೇಳಿ’ ಎನ್ನುವ ಮಾತಿಗೆ ಹೌದು ಎನ್ನುವ ಹಾಗೆ ತಲೆ ಬಾಗಿಸುವಂತಿತ್ತು ಅವರ ಆಕರ್ಷಕ ನೋಟ. ನಿಮಗೀಗ ವಯಸ್ಸೆಷ್ಟು ಕುತೂಹಲದಿಂದ ಕೇಳಿದ ಪ್ರಶ್ನೆಗೆ ಉತ್ತರಿಸದೆ ಸುಮ್ಮನಾದರು. ಯಾಕಂದ್ರೆ, ‘ನಾನ್ಯಾರಿಗೆ ಕಮ್ಮಿ ಇದ್ದೇನೆ ಅಂತೇಳಿ ಅವರು ನಕ್ಕಿದ್ದರ ಹಿಂದೆ ನೋವಿತ್ತು. ಆ ನೋವು ಅವರ ಸಿನಿಕರಿಯರ್‌ಗೆ ಸಂಬಂಧಿಸಿದ್ದು.

ದೀರ್ಘ ಕಾಲದ ಬ್ರೇಕ್ ನಂತರ ಬಿಗ್‌ಬಾಸ್ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಬಂದ ಈ ಚೆಲುವೆಗೆ, ಸೆಕೆಂಡ್ ಇನ್ನಿಂಗ್ಸ್ ಸಖತ್ ಆಗಿಯೇ ಇರುತ್ತೆ ಎನ್ನುವ ಲೆಕ್ಕಾಚಾರವಿತ್ತು. ಆದರೆ ಅದು ಕೊಂಚ ನಿರಾಸೆ ಮೂಡಿಸಿದೆ. ಅವರೇ ಹೇಳುವ ಪ್ರಕಾರ ಈಗವರಿಗೆ ಬರುತ್ತಿರುವ ಪಾತ್ರಗಳೆಲ್ಲ, ವಯಸ್ಸಿಗೆ ಮೀರಿದವು. ತಾಯಿ ಪಾತ್ರ, ಅತ್ತೆ, ಅತ್ತಿಗೆ ಇಲ್ಲವೇ ಗ್ಲಾಮರಸ್ ಪಾತ್ರಗಳಂತೆ. ಅವು  ಒಪ್ಪಿಕೊಳ್ಳುವಂತಿದ್ದರೂ ಬಹುತೇಕ ಇದ್ದು ಇಲ್ಲದಂತೆ ಬಂದು ಹೋಗುವ ಪಾತ್ರಗಳು. ಅವರು ಸರಿ ಹೋಗಲ್ಲ ಅಂತ ತಿರಸ್ಕರಿಸಿದ್ದಾರಂತೆ ಚಂದ್ರಿಕಾ. ಆ ನಿರ್ಧಾರವೇ ಅವರನ್ನು ಈ ತನಕ ತೆರೆಮರೆಯಲ್ಲಿ ಉಳಿಯುವಂತೆ ಮಾಡಿದೆಯಂತೆ. ಹಾಗಾದ್ರೆ ಬಿಗ್‌ಬಾಸ್‌ಗೆ ಹೋಗಿ  ಬಂದ ನಂತರ ಇಷ್ಟು ದಿನದಲ್ಲಿ ಚಂದ್ರಿಕಾ ಏನೆಲ್ಲ
ಮಾಡಿದ್ರು? ಎಲ್ಲಿಗೆ ಹೋಗಿದ್ದರು? 

ಬಿಗ್‌ಬಾಸ್‌ಗೆ ಹೋಗಿ ಬಂದ ನಂತರ ನನಗೂ ಸಾಕಷ್ಟು ನಿರೀಕ್ಷೆ ಇತ್ತು. ಒಂದ್ರೀತಿ ಸೆಕೆಂಡ್ ಇನ್ನಿಂಗ್ಸ್ ಅಂತಲೇ ಅಂದುಕೊಂಡಿದ್ದೆ.ಆ ನಿರೀಕ್ಷೆಗೆ ಪೂರಕವಾಗಿ  ಒಂದಷ್ಟು ಸಿನಿಮಾ ಮತ್ತು ಸೀರಿಯಲ್ ಆಫರ್ ಬಂದಿದ್ದು ನಿಜ. ಆದ್ರೆ ಪಾತ್ರಗಳು ಮನಸ್ಸಿಗೆ ಹಿಡಿಸಿಲ್ಲ. ನಟನೆಗೆ ಅವಕಾಶ ಇರುವಂತಹ ಒಂದೇ ಒಂದು ಪಾತ್ರವೂ ಈ ತನಕ ಸಿಕ್ಕಿಲ್ಲ.ಹಾಗಾಗಿ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.

* ಸೀರಿಯಲ್‌ಗಿಂತ ಸಿನಿಮಾ ನನ್ನ ಆದ್ಯತೆಯ ಕ್ಷೇತ್ರ. ಒಳ್ಳೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಆಸೆಯಿದೆ. ಆದ್ರೆ ಅವಕಾಶಗಳು ಬರುತ್ತಿಲ್ಲ. ನಾನಾಗಿಯೇ ಕೆಲವರನ್ನು ಕೇಳಿದ್ರೆ, ಯಾವ ಪಾತ್ರಕ್ಕೆ ನೀವು ಸೂಟ್ ಆಗಬಹುದು ಅಂತ ನಿರ್ಧರಿಸುವುದು ಕಷ್ಟ. ತಾಯಿ ಪಾತ್ರ ಮಾಡುವಷ್ಟು ನಿಮಗೆ ವಯಸ್ಸಾಗಿಲ್ಲ. ಇತ್ತ ಹೀರೋಯಿನ್ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳುವಂತಿಲ್ಲ ಅಂತಾರೆ. ಹೀಗಾಗಿ ಒಂದೊಳ್ಳೆ ಅವಕಾಶ ಅಂತ ‘ಎರಡು ಕನಸು’ ಹೆಸರಿನ ಸೀರಿಯಲ್ ಒಪ್ಪಿಕೊಂಡೆ. ಅಲ್ಲಿ ಸಿಕ್ಕಿದ್ದು. ನೆಗೆಟಿವ್ ಶೇಡ್ ಪಾತ್ರ. ಅದ್ಯಾಕೋ ಆ ಪಾತ್ರದ ಬಗ್ಗೆ ಅಷ್ಟಾಗಿ ಪಾಸಿಟಿವ್ ರೆಸ್ಪಾನ್ಸ್ ಸಿಗಲಿಲ್ಲ. ಹಾಗಾಗಿ  ಅದರಿಂದ ಹೊರ ಬಂದೆ.

* ತಮಿಳು ಸೀರಿಯಲ್  ಮತ್ತು ಸಿನಿಮಾಗಳಲ್ಲಿ  ರಾಧಿಕಾ, ಗೌತಮಿ ಹಾಗೂ ರಮ್ಯ ಕೃಷ್ಣ ಈಗಲೂ ಬ್ಯುಸಿ. ಅವರಿಗೆ ಹೋಲಿಕೆ ಮಾಡಿಕೊಂಡರೆ, ಅವರಿಗಿಂತ ನಾನು ಚಿಕ್ಕವಳು. ಆದ್ರೂ ಇಲ್ಲಿ  ನನಗೆ ಒಳ್ಳೆಯ ಅವಕಾಶಗಳು ಯಾಕೆ ಸಿಗುತ್ತಿಲ್ಲವೋ ನನಗೆ ಅರ್ಥವಾಗುತ್ತಿಲ್ಲ.

*ಹಾಗಂತ ಇಂಥದ್ದೇ ಪಾತ್ರಬೇಕು ಅಂತ ನಾನು ಬೇಲಿ ಹಾಕಿಕೊಂಡಿಲ್ಲ. ಪರ್‌ಫಾರ್ಮೆನ್ಸ್ ಓರಿಯೆಂಟೆಡ್ ಪಾತ್ರಗಳು ಸಿಕ್ಕರೆ ಅಭಿನಯಿಸೋಣ ಎನ್ನುವ ಆಸೆ ಇದೆ. ಆದ್ರೆ ಅಂತಹ ಪಾತ್ರಗಳೇ ಬರುತ್ತಿಲ್ಲ. ಒಂದೆರಡು ಸ್ಟಾರ್  ಚಿತ್ರಗಳಲ್ಲಿಯೇ ತಾಯಿ ಪಾತ್ರಗಳಲ್ಲಿ ಅಭಿನಯಿಸುವ ಆಫರ್ ಬಂದವು. ಪಾತ್ರ ಕೇಳಿ ಓಕೆ ಅಂದಿದ್ದೆ. ಆದ್ರೆ,ಆ ಪಾತ್ರಗಳಿಗೆ ಪರಭಾಷೆ ನಟಿಯರು ಬಂದರು. ಆ ಅವಕಾಶ  ತಪ್ಪಿ ಹೋಯಿತು. ಅದೆಲ್ಲ ಯಾಕಾಯಿತು ಅನ್ನೋದೇ  ಅರ್ಥ ಆಗುತ್ತಿಲ್ಲ.

ನಾನು ಗ್ಲಾಮರಸ್ ನಟಿ ಅನ್ನೋದು ನಿಜ. ಆದ್ರೆ ನಾನೀಗ  ಪ್ರೇಕ್ಷಕರಿಗೆ ಇಷ್ಟವಿಲ್ಲದ ಪಾತ್ರ ಮಾಡಲು ರೆಡಿಯಿಲ್ಲ. ಆದರೂ ಕೆಲವರು ನನ್ನನ್ನು ಸ್ಪೆಷಲ್ ಪಾತ್ರಕ್ಕೆ ಕೇಳುತ್ತಾರೆ. ಇನ್ನಾವುದೋ ಗ್ಲಾಮರಸ್ ಪಾತ್ರಕ್ಕೆ ಬರುತ್ತೀರಾ ಎನ್ನುತ್ತಾರೆ. ಅವರಿಗೆ ನಾನೇಕೆ ಈ ಬರಿ ಗ್ಲಾಮರಸ್ ಆ್ಯಂಗಲ್‌ನಲ್ಲೇ ಕಾಣಿಸಿಕೊಳ್ಳುತ್ತೇನೋ ಗೊತ್ತಾಗುತ್ತಿಲ್ಲ. ಕನ್ನಡದಲ್ಲಿ ಸಾಕಷ್ಟು ಟ್ಯಾಲೆಂಟೆಡ್ ನಿರ್ದೇಶಕರಿದ್ದಾರೆ. ಅವರಿಗೆ ಪರ್‌ಫಾರ್ಮೆನ್ಸ್ ನಟಿಯರು ಯಾಕೆ ಕಾಣುತ್ತಿಲ್ವೋ ಗೊತ್ತಿಲ್ಲ. ಅವರು ಒಳ್ಳೆಯ ಪಾತ್ರಗಳನ್ನು ಕೊಟ್ಟರೆ ನಾನು ಈಗಲೂ ಅಭಿನಯಿಸಲು ರೆಡಿ. 

Comments 0
Add Comment

    ರಕ್ಷಿತ್ ಶೆಟ್ಟಿ ಏಕೆ ನಾಟ್ ರೀಚಬಲ್ ?

    entertainment | Thursday, May 24th, 2018