ನಾಳೆ 1ಗಂಟೆಗೆ ವಿಜೇತರನ್ನು ಘೋಷಿಸುವ ಸಾಧ್ಯತೆ ಇದೆ. ಒಂದು ಮೂಲದ ಪ್ರಕಾರ ನಾಳೆ ನೇರ ಪ್ರಸಾರದಲ್ಲೇ ಕಾರ್ಯಕ್ರಮ ನಡೆಸಿಕೊಡಬಹುದೆನ್ನಲಾಗಿದೆ.

ಬೆಂಗಳೂರು(ಜ. 28): ಒಳ್ಳೆ ಹುಡುಗ ಎಂಬ ಟ್ಯಾಗ್'ಲೈನ್ ಇಟ್ಟುಕೊಂಡ ಪ್ರಥಮ್ ಈ ಬಾರಿಯ ಬಿಗ್ ಬಾಸ್ ವಿನ್ನರ್ ಎಂಬ ಸುದ್ದಿ ಬಹಳ ದಟ್ಟವಾಗಿ ಕೇಳಿಬರುತ್ತಿದೆ. ಸುವರ್ಣನ್ಯೂಸ್ ವೆಬ್'ಸೈಟ್'ನಲ್ಲೂ ಈ ಕುರಿತು ಸುದ್ದಿ ಪ್ರಕಟವಾಗಿತ್ತು. ಆದರೆ, ಕಲರ್ಸ್ ಕನ್ನಡ ವಾಹಿನಿ ಮೂಲಗಳ ಪ್ರಕಾರ ಇನ್ನೂ ಕೂಡ ಬಿಗ್ ಬಾಸ್ ವಿಜೇತರನ್ನು ಘೋಷಿಸಲಾಗಿಲ್ಲ. ಈಗ ಖಚಿತವಾಗಿ ಸಿಕ್ಕಿರುವ ಮಾಹಿತಿ ಪ್ರಕಾರ ಮೋಹನ್ ಮತ್ತು ಮಾಳವಿಕಾ ಅವರು ಬಿಗ್ ಬಾಸ್ ಪ್ರಶಸ್ತಿ ರೇಸ್'ನಿಂದ ಹೊರಬಿದ್ದಿದ್ದಾರೆ. ಅತೀ ಕಡಿಮೆ ವೋಟ್ ಪಡೆದಿರುವ ಇವರಿಬ್ಬರು ಔಟ್ ಆಗಿದ್ದಾರೆ. ಕೀರ್ತಿಕುಮಾರ್, ಪ್ರಥಮ್ ಮತ್ತು ರೇಖಾ ಅವರು ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ.

ಸೀಕ್ರೆಟ್ ಶೂಟಿಂಗ್:
ಮಾಹಿತಿ ಲೀಕ್ ಆಗಿ ವೀಕ್ಷಕರಲ್ಲಿ ಕುತೂಹಲ ಕಡಿಮೆಯಾಗಿಬಿಡುವ ಅಪಾಯವಿರುವುದರಿಂದ ಬಿಗ್ ಬಾಸ್ ಫಿನಾಲೆ ಕಾರ್ಯಕ್ರಮವನ್ನು ಬಹಳ ಕಟ್ಟುನಿಟ್ಟಾಗಿ ನಡೆಸಲು ಕಲರ್ಸ್ ಕನ್ನಡ ವಾಹಿನಿ ನಿರ್ಧರಿಸಿದೆ. ಇಂದು ನಡೆಯಬೇಕಿದ್ದ ಶೂಟಿಂಗನ್ನು ನಾಳೆಗೆ ಮುಂದೂಡಲಾಗಿದೆ. ನಾಳೆ 1ಗಂಟೆಗೆ ವಿಜೇತರನ್ನು ಘೋಷಿಸುವ ಸಾಧ್ಯತೆ ಇದೆ. ಒಂದು ಮೂಲದ ಪ್ರಕಾರ ನಾಳೆ ಭಾನುವಾರ ನೇರ ಪ್ರಸಾರದಲ್ಲೇ ಕಾರ್ಯಕ್ರಮ ನಡೆಸಿಕೊಡಬಹುದೆನ್ನಲಾಗಿದೆ.

ಮತ್ತೊಂದು ಮೂಲದ ಪ್ರಕಾರ, ಲೈವ್ ಆಗಿ ಕಾರ್ಯಕ್ರಮ ನಡೆಯದೇ ರೆಕಾರ್ಡ್ ಮಾಡಿದ್ದೇ ಆದಲ್ಲಿ, ಕಾರ್ಯಕ್ರಮದ ಸಭಾಂಗಣದಲ್ಲಿ ಒಳಗಿದ್ದವರೆಲ್ಲರ ಮೊಬೈಲನ್ನು ಸ್ವಿಚ್ ಆಫ್ ಮಾಡಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ಮಾಹಿತಿ ಎಲ್ಲಿಯೂ ಹೊರಹೋಗದಂತೆ ನಿಗಾ ವಹಿಸಬಹುದು ಎಂಬ ಸುದ್ದಿ ಕೇಳಿಬರುತ್ತಿದೆ.

ಇದೇ ವೇಳೆ, ಇಂದು ಮಧ್ಯಾಹ್ನ ಸಾರ್ವಜನಿಕರಿಗೆ ವೋಟಿಂಗ್ ಅವಕಾಶ ಮುಕ್ತಾಯಗೊಂಡಿದೆ. ಪ್ರಥಮ್, ರೇಖಾ ಮತ್ತು ಕೀರ್ತಿಕುಮಾರ್ ನಡುವೆ ನಿಕಟ ಪೈಪೋಟಿ ಇದೆಯಂತೆ. ಈ ಮೂವರಲ್ಲಿ ಯಾರು ಬೇಕಾದರೂ ಬಿಗ್ ಬಾಸ್ ವಿನ್ನರ್ ಆಗಬಹುದು ಎಂಬ ಮಾಹಿತಿ ಸದ್ಯಕ್ಕೆ ತಿಳಿದುಬಂದಿದೆ.