ಈ ಸಾರಿ ಬಿಗ್ ಬಾಸ್ ಮನೆಯಲ್ಲಿರೋ ಲವ್ ಬರ್ಡ್ಸ್ ನವೀನ್ ಸಜ್ಜು ಮತ್ತು ಸೋನು ಪಾಟೀಲ್ ಫುಲ್ ಫೇಮಸ್. ಚಳಿಯಲ್ಲಿ ನಡುಗಿದಾಗ, ಬೇಜಾರಾದಾಗ, ಜೊತೆಯಿದ್ದು ಅತ್ತಾಗ ಸಜ್ಜು-ಸೋನು ಸದಾ ಸಮೀಪದಲ್ಲೇ ಇರುತ್ತಾರೆ.

ಈ 'ಸೂಪರ್ ಹುಡುಗ'ನಿಗೆ ಸೋನು 'ಐ ಲವ್ ಯೂ' ಎಂದೂ ಹೇಳಿಯಾಗಿದೆ. ಆದರೆ, ನವೀನ್ ಒಳ್ಳೆಯ ಸ್ನೇಹಿತನಂತೆ ಪ್ರೀತಿಯ ಸಂಕೇತವಾಗಿ ಸೋನು ಕೊಟ್ಟ ಬಲೂನ್‌ ಅನ್ನು ಅಕ್ಸೆಪ್ಟ್ ಮಾಡಿದ್ದರು. ಈಗ ಮುತ್ತಿನ ಗಮ್ಮತ್ತು: ಪ್ರೀತಿ-ಗೀತಿ ಏನೂ ಇಲ್ಲ ಎಂದು ಓಡಾಡುತ್ತಿದ್ದ ಸೋನು, ಬಿಗ್ ಬಾಸ್ ಮನೆಯಲ್ಲಿಯೇ ಸಜ್ಜುಗೆ ಮುತ್ತು ಕೊಟ್ಟಿದ್ದಾರೆ!

ಮ್ಯೂಸಿಕಲ್ ಚೇರ್ ಟಾಸ್ಕ್ ಕೊಟ್ಟಿದ್ದನ್ನೇ ಸೋನ್ ಎನ್‌ಕ್ಯಾಶ್ ಮಾಡಿಕೊಂಡು, ಮುತ್ತು ಹರಿಯಬಿಟ್ಟಿದ್ದಾರೆ. ಸೋತವರು ಡಬ್ಬಿಯಲ್ಲಿದ್ದ ಚೀಟಿ ಎತ್ತಿ ಅದರಲ್ಲಿ ಏನೀದೆಯೋ ಅದನ್ನು ಮಾಡಬೇಕಿತ್ತು. ಸೋತಿದ್ದ ಸೋನುಗೆ ಸಿಕ್ಕ ಟಾಸ್ಕ್ ಏನು ಗೊತ್ತಾ?

ತುಟಿಗೆ ಗಾಢವಾಗಿ ಲಿಪ್‌ಸ್ಟಿಕ್ ಲೇಪಿಸಿಕೊಂಡು, ಮನೆಯ ಸದಸ್ಯರಿಗೆಲ್ಲ ಮುತ್ತು ಕೊಡಬೇಕಿತ್ತು. ಕೆಲವರು ಕಿಸ್ ಬೇಡವೆಂದು ಮಿಸ್ ಮಾಡಿಕೊಂಡರು. ಆದರೆ, ಬಿಗ್‌ಬಾಸ್ ಆಜ್ಞೆ ಇದ್ದ ಕಾರಣ ಈ ಟಾಸ್ಕ್ ಅನ್ನು ಸೋನು ಪೂರೈಸ ಬೇಕಿತ್ತು. ಎಲ್ಲರಿಗೂ ಮುತ್ತು ಕೊಟ್ಟ ಸೋನುಗೆ ಸಜ್ಜು ಸರದಿ ಬಂದಾಗ, ಮುಖ ಫುಲ್ ಕೆಂಪು ಕೆಂಪು. ನಾಚು ನಾಚುತ್ತಲೇ ಮುತ್ತು ಕೊಟ್ಟು ಟಾಸ್ಕ್ ಕಂಪ್ಲೀಟ್ ಮಾಡಿದರು. ಸೋತ ನವೀನ್‌‌ಗೆ ಸಿಕ್ಕ ಟಾಸ್ಕ್ ಏನು?

ಮ್ಯೂಸಿಕಲ್ ಛೇರ್ ಟಾಸ್ಕ್‌ನಲ್ಲಿ ಸೋತ ನವೀನ್‌ಗೆ ಮಾತ್ರ ಈಸಿ ಶಿಕ್ಷೆ ಸಿಕ್ಕಿತು. ಸ್ವಿಮ್ಮಿಂಗ್ ಪೂಲ್‌ನಲ್ಲಿ ಐದು ಬಾರಿ ಮುಳುಗಿ ಏಳಬೇಕಿತ್ತು. ಆದರೆ, ಮುತ್ತಿನ ಘಟನೆ ಆದ್ಮೇಲಾದರೂ ಸೋನು ಮೇಲೆ ಸಜ್ಜುಗೆ ಪ್ಯಾರ್ ಆಗುತ್ತಾ ನೋಡಬೇಕು.