ಬಿಗ್ ಬಾಸ್ ಸ್ಪರ್ಧಿ ದಿವಾಕರ್’ಗೆ ಒಲಿದಿದೆ ಬಿಗ್ ಆಫರ್..!

Bigg Boss Runner up Diwakar to make his Sandalwood debut
Highlights

ಬಿಗ್ ಬಾಸ್ ಸೆಕೆಂಡ್ ರನ್ನರ್ ಅಪ್ ಆಗಿದ್ದ ದಿವಾಕರ್ ಇದೀಗ ಕನ್ನಡದಲ್ಲಿ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 5ರಲ್ಲಿ ಸಾಮಾನ್ಯ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದ ದಿವಾಕರ್ ನಂತರ ಸೆಲೆಬ್ರಿಟಿಯಾದರು.

ಬೆಂಗಳೂರು : ಬಿಗ್ ಬಾಸ್ ಸೆಕೆಂಡ್ ರನ್ನರ್ ಅಪ್ ಆಗಿದ್ದ ದಿವಾಕರ್ ಇದೀಗ ಕನ್ನಡದಲ್ಲಿ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಬಿಗ್ ಬಾಸ್ ಸೀಸನ್ 5ರಲ್ಲಿ ಸಾಮಾನ್ಯ ಸ್ಪರ್ಧಿಯಾಗಿ ಎಂಟ್ರಿಯಾಗಿದ್ದ ದಿವಾಕರ್ ನಂತರ ಸೆಲೆಬ್ರಿಟಿಯಾದರು.

ಇದೀಗ  ಇವರಿಗೆ ಚಿತ್ರವೊಂದಕ್ಕೆ ಆಫರ್ ಬಂದಿದೆ. ಮನೋಜ್ ರವಿಚಂದ್ರನ್ ನಟಿಸುತ್ತಿರುವ ಚಿತ್ರದಲ್ಲಿ ಅವರ ಗೆಳೆಯನ ಪಾತ್ರದಲ್ಲಿ  ಅಭಿನಯಿಸುತ್ತಾರೆ ಎನ್ನಲಾಗುತ್ತಿದೆ.

 ಮನೋಜ್ ಚಿಲ್ಲಮ್ ಎಂಬ ಚಿತ್ರ ಮಾಡುತ್ತಿದ್ದು, ಈ ಚಿತ್ರವನ್ನು ಚಂದ್ರಕಲಾ ನಿರ್ದೇಶನ ಮಾಡುತ್ತಿದ್ದು, ಹಿರಿಯ ನಟಿ ಸರಿತಾ ಅವರೂ ಕೂಡ  ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಸೇಲ್ಸ್ ಮ್ಯಾನ್ ಆಗಿದ್ದ ದಿವಾಕರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು  ರನ್ನರ್ ಅಪರ್ ಆಗಿದ್ದರು. ಕರ್ನಾಟಕದಾದ್ಯಂತ ಸಾಕಷ್ಟು ಮನೆ ಮಾತಾಗಿದ್ದರು.  

loader