ಬಿಗ್ ಬಾಸ್ ಮನೆಗೆ ಶರಣ್ ಎಂಟ್ರಿ ಕೊಟ್ಟಿದ್ದರು. ಮನೆ ಒಳಗಿರುವವರ ವಿವಿಧ ಕಲಾ ಪ್ರದರ್ಶನ ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದರು. ನಂತರ ಹೊರಬಂದದು ತಮ್ಮ ವಿಕ್ಟರಿ-2 ಸಿನಿಮಾ ಬಗ್ಗೆ ಮಾತನಾಡಿದ್ದಲ್ಲದೆ ಗಾಯನ ಮಾಡಿ ರಂಜಿಸಿದರು.

ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಶರಣ್‌ ಅವರನ್ನು ಸ್ಪರ್ಧಿಗಳು ಬರಮಾಡಿಕೊಂಡರು. ಆತ್ಮೀಯವಾಗಿ ಸ್ವಾಗತ ಕೋರಿ ಎಲ್ಲರೂ ಶರಣ್‌ ಜತೆ ಕುಶಲೋಪರಿ ನಡೆಸಿದರು. ರಶ್ಮಿ ನಿರೂಪಣೆಯಲ್ಲಿ ಶರಣ್‌ ಮುಂದೆ ಸ್ಪರ್ಧಿಗಳ ಪ್ರತಿಭಾ ಪ್ರದರ್ಶನ ನಡೆಯಿತು. ಬಾಡಿ ಬಿಲ್ಡರ್ ಎವಿ ರವಿ ತಮ್ಮ ದೇಹದಾರ್ಢ್ಯ ಪ್ರದರ್ಶಿಸಿದರು. 

ನಂತರ ನವೀನ್‌, ನಯನಾ ಅವರ ಸಾಂಗ್‌, ಧನಂಜಯ್‌, ರಾಕೇಶ್‌, ಅಕ್ಷತಾ ಸಂದೇಶ ಸಾರುವ ಪ್ರದರ್ಶನ ನೀಡಿದರು. ಆಡಮ್‌ ಪಾಷಾ ಮತ್ತು ಶಶಿ ಜಂಟಿಯಾಗಿ ನಡೆಸಿದ ಸಾಲ್ಸಾ ಮಿಶ್ರಿತ ನೃತ್ಯಕ್ಕೆ ಶರಣ್ ಹೊಗಳಿಕೆಗಳ ಮಹಾಪೂರ ಹರಿಸಿದರು. ಆಡಮ್‌, ಶಶಿ ಗೆದ್ದಿದ್ದಾರೆ ಎಂದು ಶರಣ್‌ ಘೋಷಿಸಿ ಇಬ್ಬರಿಗೂ ಪ್ರಶಸ್ತಿ ನೀಡಿ ಹೊರಬಂದರು.

ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ನೇಹಾ ಅವರ ಜತೆಯೂ ಸುದೀಪ್ ಮಾತನಾಡಿದರು. ಸ್ನೇಹ ಹೇಳುವ ಪ್ರಕಾರ ಮುಂದಿನ ವಾರ ಮುರುಳಿ ಎಲಿಮಿನೇಟ್ ಆಗಲಿದ್ದಾರಂತೆ. ನಾನೇಕೆ ಹೊರಬಂತೆ ಎನ್ನುವುದೆ ಗೊತ್ತಾಗುತ್ತಿಲ್ಲ ಎಂದಾಗ ಸುದೀಪ್, ವೂಟ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ನೋಡಿ ಎಂದು ಹೇಳಿ ಕಳುಹಿಸಿದರು.