ಅಕ್ಷತಾ ವೇದಿಕೆಗೆ ಬರುತ್ತಿದ್ದಂತೆ ಮನೆಯಲ್ಲಿ ಯಾವ ರಸ ಇತ್ತು? ಎಂದು ಸುದೀಪ್ ಪ್ರಶ್ನೆ ಮಾಡಿದರು. ಸ್ನೇಹಕ್ಕೆ  ಯಾವ ರಸ ಎಂದು ಕೇಳಿದರು.

ಸ್ನೇಹಕ್ಕೆ ಒಂದು ರಸ ಸೃಷ್ಟಿ ಮಾಡಬಹುದು. ಅದಕ್ಕೆ ‘ಜುಗಾಡ್ ರಸ’ ಎಂದು ಕರೆಯಬಹುದು ಎಂದರು. ನಾನು ಮನೆಯಲ್ಲಿ ಯಾವುದೆ ಮುಖವಾಡ ಧರಿಸಲಿಲ್ಲ. ಒನ್ ಮ್ಯಾನ್ ಆರ್ಮಿಯಾಗಿ ನುಗ್ಗಿದ್ದೇನೆ ಎಂದರು,

ನಾನು ಕಿಚನ್ ಜತೆ  ಹೆಚ್ಚಿನ ಬಾಂಧವ್ಯ ಬೆಳೆಸಿಕೊಂಡಿದ್ದೆ. ಅಡುಗೆಯಲ್ಲಿ ನಾನು ಇಷ್ಟೊಂದು ಪರಿಣಿತಿ ಹೊಂದಿದ್ದೇನೆ ಎಂದು ಗೊತ್ತಾಗಿದ್ದೆ ಬಿಗ್ ಬಾಸ್ ಮನೆಗೆ ಹೋದ ಮೇಲೆ ಗೊತ್ತಾಯಿತು ಎಂದು ಅಕ್ಷತಾ ಹೇಳಿದರು.

ರಾಕೇಶ್ ಜತೆ ಕೊನೆಗೂ ರಾಜಿಯಾಗಲೇ ಇಲ್ಲ. ಕೇವಲ ಅಭಿಪ್ರಾಯ ಮಾತ್ರ ಹಂಚಿಕೊಂಡಿದ್ದೇವೆ. ನಾನು ರಾಕೇಶ್ ಜತೆ ರಾಜಿಯಾಗಲೇ ಇಲ್ಲ. ನನ್ನ ಕಡೆಯಿಂದಲೇ ಜಾಸ್ತಿ ಡ್ಯಾಮೆಜಿಂಗ್ ಸ್ಟೇಟ್ ಮೆಂಟ್ ಆಗಿದೆ ಎಂದು ಹೇಳಿದರು. ಫ್ರಾಂಕ್ ಮೂಲಕ ಎಲಿಮಿನೇಶನ್ ಮಾಡಿದ ಹ್ಯಾಂಗ್‌ ವೋವರ್ ಇನ್ನು ಕಡಿಮೆಯಾಗಿಲ್ಲ ಎಂದರು.

ಬಿಗ್‌ ಬಾಸ್ ಮನೆಯಲ್ಲಿ ಆ್ಯಂಡಿ ಫನ್ನಿ ಆದರೆ ಡೆಂಜರಸ್, ಕವಿತಾ ಮಳ್ಳಿ, ಶಶಿ ಅಹಂಕಾರಿ, ನವೀನ್  ಅಣ್ಣತಮ್ಮ, ರಶ್ಮಿ ಹೆಮ್ಮಾರಿ, ರಾಕೇಶ್‌ಗೆ ಶಬ್ದಗಳೆ ಸಿಗುತ್ತಿಲ್ಲ ಆದರೆ ಫ್ಲರ್ಟಿ ಮತ್ತು ಸ್ಮಾರ್ಟ್ ಆಗಿರುವ ಟ್ಯಾಲೆಂಟಡ್ ವ್ಯಕ್ತಿ  ಎಂದರು. ನವೀನ್ ಮತ್ತು ಶಶಿ ಟಾಪ್ 2 ದಲ್ಲಿ ಇರುತ್ತಾರೆ ಎಂದು ಅಕ್ಷತಾ ಹೇಳಿದರು.