ಬಿಗ್ ಬಾಸ್ ವೇದಿಕೆಯಲ್ಲಿ ನವರಸ ನಾಯಕ ಜಗ್ಗೇಶ್ ಸೆಲೆಬ್ರಿಟಿ ಜೀವನ ಯಾರಿಗೂ ಬೇಡ.. ಅಭಿಮಾನವಿದ್ದರೆ ಕೈ ಮಾಡಿ, ಹಾಯ್ ಮಾಡಿ ..ಕಣ್ಣು ಹೊಡೆಯಿರಿ ದಯವಿಟ್ಟು ಸೆಲ್ಫಿ ತೆಗೆದುಕೊಳ್ಳಲು ಮಾತ್ರ ಬರಬೇಡಿ ಎಂದರು.

ಕಲಾವಿದರನ್ನು ಕಂಡರೆ ಜನ ಮೆಚ್ಚಿ ಈ ಮೊಬೈಲ್ ಕಾಳದಲ್ಲಿ ಫೋಟೋ ತೆಗೆದುಕೊಳ್ಳಲು ಪ್ರತಿಯೊಬ್ಬರು ಬರುತ್ತಾರೆ. ಬಂದಿದ್ದು ಅಲ್ಲದೇ ಕ್ಯಾಮರಾ ಫೋಕಸ್ ಸರಿ ಮಾಡಿಕೊಳ್ಳುತ್ತಾರೆ. ದೊಡ್ಡ ಕಲಾವಿದನಿಗೆ ಪರ್ಸನಲ್ ಲೈಫೆ ಇಲ್ಲವಾಗಿದೆ.

ಮೊದಲು ಒಬ್ಬ ಸೆಲ್ಫಿ ತೆಗೆಯಲು ಬರುತ್ತಾನೆ. ಬೇಡ ಬೇಡ ಅಂದರೂ ಕೇಳಲ್ಲ. ಆಮೇಲೆ ಜನ ಗುಂಪು ಕಟ್ಟಿಕೊಳ್ಳುತ್ತಾರೆ. 5 ತಾಸು ಹಾಗೆ ನಿಂತುಕೊಳ್ಳಬೇಕಾದ ಅನಿವಾರ್ಯ ಎದುರಾಗುತ್ತದೆ. ಪೋಸ್ ಕೊಟ್ಟರೆ ಒಳ್ಳೆಯವ.. ಇಲ್ಲವಾದರೆ ಬೈಸಿಕೊಳ್ಳಬೇಕಾಗುತ್ತದೆ. ಸೆಲ್ಫಿ ಹೊಡತಕ್ಕೆ ಸಿಲುಕಿ ನಿಸರ್ಗದ ಕರೆಯನ್ನು ಪೂರೈಸಿಕೊಳ್ಳಬೇಕಾಗುತ್ತದೆ. ಎಂದು ತಮ್ಮ ಆತಂಕ-ನೋವು ತೊಡಿಕೊಂಡರು.