ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದ ನವರಸ ನಾಯಕ ಜಗ್ಗೇಶ್ ಸುದೀಪ್ ರೊಂದಿಗೆ ಮಾತಿನ ಮಂಟಪವನ್ನೇ ಕಟ್ಟಿದರು. ತಮ್ಮ ಜೀವನದ ಘಟನೆಗಳನ್ನು ತಮ್ಮದೆ ಶೈಲಿಯಲ್ಲಿ ಹೇಳುತ್ತ ಬಂದ ಜಗ್ಗೇಶ್ ಸುದೀಪ್ ಅವರನ್ನು ಹಾಡಿ ಹೊಗಳಿದರು.

ಜಗ್ಗೇಶ್ ಅವರ 8 ಎಂಎಂ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ 8 ಎಂಎಂ ಸಿನಿಮಾ ನೋಡಲು ಬರಲೇಬೇಡಿ ಎಂದು ಜಗ್ಗೇಶ್ ಅವರೇ ಹೇಳಿದ್ದಾರೆ! ಅವರು ಯಾಕೆ ಹೀಗೆ ಹೇಳಿದರು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನನ್ನ ಇಲ್ಲಿಯವರೆಗಿನ ಪಾತ್ರಗಳನ್ನು ಮೆಚ್ಚಿಕೊಂಡಿದ್ದೀರಿ. ಆದರೆ ಇದು ಹಳೆಯ ಜಗ್ಗೇಶ್ ಮಾಡಿದ ಪಾತ್ರ ಅಲ್ಲ. ಹಳೆಯ ಜಗ್ಗೇಶನ ಛಾಪು ಇಲ್ಲಿ ಇರಲ್ಲ. ಹೊಸ ನಟನೊಬ್ಬ ಬಂದು ಪಾತ್ರ ಮಾಡಿದ್ದಾನೆ ಎಂದು ಸ್ವೀಕರಿಸುವವರು ಮಾತ್ರ ಬನ್ನಿ ಎಂದು ಹೇಳಿದ್ದಾರೆ.

ಬಿಗ್ ಬಾಸ್ ಮನೆಯ ಅಷ್ಟೂ ಕತೆಗಳು

ಡಾ.ರಾಜ್‌ಕುಮಾರ್‌ ಅವರಂತೆ ನಟಿಸಬೇಕೆಂಬ ಆಸೆ ಇತ್ತು. ಅದು 8 ಎಂ ಎಂ ಚಿತ್ರದಲ್ಲಿ ಸಾಧ್ಯವಾಗೊಇದೆ. ಒಮ್ಮೆ 5 ನಿಮಿಷ ಹಾಗೂ ಮತ್ತೊಂದು ದೃಶ್ಯವನ್ನು ಒಂದೇ ಶಾಟ್ ನಲ್ಲಿ ನಟಿಸಿದ್ದೇನೆ. ಅಲ್ಲಿ ನಟಿಸಿದ್ದೇನೆ ಎನ್ನುವುದಕ್ಕಿಂತ ನನ್ನೊಳಗೆ ಅನೇಕ ಕಲಾವಿದರ ನೆನಪು ಮಾಡಿಕೊಂಡು ಅಭಿನಯಿಸಿದ್ದೇನೆ ಎಂದರು.