ಬಿಗ್ ಬಾಸ್  ಮನೆ ಕಿತ್ತಾಟಗಳ ತಾಣವಾಗಿ ಬದಲಾಗಿದೆ. ಒಂದು ಕಡೆ ಬಿಗ್ ಬಾಸ್ ಕೊಡುತ್ತಿರುವ ಟಾಸ್ಕ್ ಗಳು ಹಾಗೂ ಸ್ಪರ್ಧಿಗಳು ಆಡುತ್ತಿರುವ ರೀತಿ ಬಿಗ್ ಬಾಸ್ ಮನೆಯನ್ನು ಗಲಾಟೆಯ ತಾಣ ಮಾಡಿ ಹಾಕಿದೆ.

ಧನರಾಜ್ ಮನೆಯ ನಾಯಕತ್ವ ವಹಿಸಿಕೊಂಡ ಮೇಲೆ ಒಳಗಿದ್ದ ಭಿನ್ನಮತ ಸ್ಫೋಟವಾಗಿದೆ. ಅಡುಗೆ ಮನೆ ಬಳಿ ಆ್ಯಂಡಿ ಮತ್ತು ಧನರಾಜ್ ಕಿತ್ತಾಡಿಕೊಂಡರು. ಕಿತ್ತಾಟ ಸರಿ ಮಾಡುವ ವೇಳೆಗೆ ಕವಿತಾ ಗೌಡ ಮತ್ತು ಆ್ಯಂಡಿ ಕಿತ್ತಾಡಿಕೊಂಡರು. ಧನರಾಜ್ ನಾಯಕರಾದ ಮೇಲೆ ಮನೆಯಲ್ಲಿ ಎಲ್ಲವೂ ಸರಿ ಇಲ್ಲ. ಇನ್ನೊಂದು ಕಡೆ ರಶ್ಮಿ ಪ್ರತಿಯೊಂದಕ್ಕೂ ಮೂಗು ತೂರಿಸಿಕೊಂಡು ಹೋಗುತ್ತಿದ್ದಾರೆ ಎಂಬ ಆರೋಪವೂಕೇಳಿ ಬಂದಿತು. ಬಿಗ್  ಬಾಸ್ ನಿರಸವಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲೂ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಧನರಾಜ್-ಆ್ಯಂಡಿ ಕಿತ್ತಾಟ, ರಶ್ಮಿ-ಧನರಾಜ್ ಕಿತ್ತಾಟ, ರಶ್ಮಿ-ಜಯಶ್ರೀ ಕಿತ್ತಾಟ,  . ರಶ್ಮಿ ಮತ್ತು ಜಯಶ್ರಿ, ಕವಿತಾ ನಡುವೆ ಮೊಟ್ಟೆ ಚಕಮಕಿ ಹೀಗೆ ಬಿಗ್ ಬಾಸ್ ಮನೆಯಲ್ಲಿ ಗಲಾಟೆಯೇ, ಕಿತ್ತಾಟವೇ ಜೀವನವಾಗಿದೆ.