ಬಿಗ್ ಬಾಸ್ ಸೀಸನ್ 5  'ದಿ ಮೋಸ್ಟ್ ಕಾಮ್ ಅಂಡ್ ಸ್ಫೋರ್ಟಿವ್ ವ್ಯಕ್ತಿತ್ವ ಉಳ್ಳ ರಿಯಾಜ್ ಬಾಷಾ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಾವು ಗಂಡು ಮಗುವಿಗೆ ತಂದೆಯಾದ ಸಂತೋಷವನ್ನು ಹಂಚಿಕೊಂಡಿದ್ದಾರೆ. 

'ಸಿಹಿ ಸುದ್ಧಿ ತಂದೆ. ನಾನು ತಂದೆ ಮತ್ತು ಆಯೆಷಾ ತಾಯಿಯಾದೆವು. ನಿಮ್ಮ ಆಶೀರ್ವಾದ ನಮ್ಮೊಂದಿಗಿರಲಿ ' ಎಂದು ಮಗುವಿನೊಂದಿಗಿನ ಫೋಟೋ ಹಾಕಿದ್ದಾರೆ.

ಒಂದು ಫೋಟೋದಲ್ಲಿ ಆಸ್ಪತ್ರೆ ಉಡುಪು ಧರಿಸಿ ಕೂಲ್  ಎಂದು ಕೈಸನ್ನೆ ಮಾಡಿದ್ದಾರೆ ಹಾಗೂ ಮತ್ತೊಂದರಲ್ಲಿ ಆಗಷ್ಟೇ ಹುಟ್ಟಿದ ಮಗನೊಂದಿಗೆ   ಫೋಟೋ ಹಂಚಿಕೊಂಡಿದ್ದಾರೆ.

 

ಬಾಲಿವುಡ್ ಸೆಲೆಬ್ರಿಟಿಗಳ ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಾ ರೇಡಿಯೋ ಜಾಕಿ ಕೆಲಸ ಮಾಡುತ್ತಿದ್ದಾರೆ ರಿಯಾಝ್ ಬಾಷಾ. ಬಿಗ್ ಬಾಸ್ ನಲ್ಲೂ ಉತ್ತಮ ನಡವಳಿಕೆ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.