ನಾನು ಹುಚ್ಚ ವೆಂಕಟ್‌ಗಿಂತ ಜಾಸ್ತಿ ಮೆಂಟಲ್ಲು, ಪ್ರಥಮ್‌ಗಿಂತ ಜಾಸ್ತಿ ಕಿರಿಕ್ಕು, ಕೀರ್ತಿಗಿಂತ ಜಾಸ್ತಿ ತರಲೆ ಅಂತೆಲ್ಲ ಪತ್ರ ಬರೆದವರೂ ಆ ಪಟ್ಟಿಯಲ್ಲಿದ್ದಾರೆ.ಹಾಗಿದ್ದರೆ ಹೇಗೆ ಕಲರ್ಸ್ ಸಾಮಾನ್ಯರನ್ನು ಬಿಗ್‌ಬಾಸ್ ಮನೆಯೊಳಗೆ ಸೇರಿಸಿಕೊಳ್ಳಲಿದೆ. ಅದಕ್ಕೆ ಆಡಿಷನ್ ಇರುತ್ತಾ? ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಬಿಗ್ಬಾಸ್ ಕನ್ನಡ ಸೀಸನ್-5 ಸೆಪ್ಟೆಂಬರ್ ಕೊನೆಯ ವಾರದಲ್ಲಿ ಶುರುವಾಗಲಿದೆ. ಹಾಗೊಂದು ಮಾಹಿತಿ ಬಿಗ್ಬಾಸ್ ಬಳಗದಿಂದ ಹೊರಬಿದ್ದಿದೆ. ಈ ಬಾರಿ ಬಿಗ್ಬಾಸ್ ಹಿಂದಿನ ಎಲ್ಲ ಸೀಸನ್ಗಳಿಗಿಂತ ವಿಶಿಷ್ಟವಾಗಿರುತ್ತದೆ ಎಂದು ನಂಬಲು ಸಕಾರಣಗಳಿವೆ. ಇಲ್ಲಿಯ ತನಕ ಬಿಗ್ಬಾಸ್ ಮನೆಯೊಳಗೆ ಕೇವಲ ಖ್ಯಾತನಾಮರು ಮಾತ್ರ ಇರುತ್ತಿದ್ದರು. ಈ ಬಾರಿ ಸೆಲೆಬ್ರಿಟಿಗಳ ಜೊತೆಗೆ ಜನ ಸಾಮಾನ್ಯರನ್ನೂ ಒಳಗೊಳ್ಳಲು ಬಿಗ್ಬಾಸ್ ನಿರ್ಧರಿಸಿದ್ದಾನೆ.
ಈ ಸೂಚನೆಯನ್ನು ಕಲರ್ಸ್ ವಾಹಿನಿಯ ಪರಮೇಶ್ ಗುಂಡ್ಕಲ್ ಬಹಳ ಹಿಂದೆಯೇ ನೀಡಿದ್ದರು. ಅವರ ಫೇಸ್ಬುಕ್ ಪುಟದಲ್ಲಿ ನಿಮಗೆ ಬಿಗ್ಬಾಸ್ ಮನೆಯೊಳಗೆ ಕಾಲಿಡುವ ಆಸಕ್ತಿಯಿದೆಯೇ ಎಂಬ ಪ್ರಶ್ನೆ ಕೇಳಿದ್ದರು. ಅದಕ್ಕೆ ಸಾವಿರಾರು ಮಂದಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ತಮಗೂ ಬಿಗ್ಬಾಸ್ ಸಂಚಿಕೆಯಲ್ಲಿ ಭಾಗವಹಿಸುವ ಇಚ್ಛೆ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅದಷ್ಟೇ ಅಲ್ಲದೇ, ಅನೇಕರು ಈಗಾಗಲೇ ಕಲರ್ಸ್ ವಾಹಿನಿಗೆ ತಮ್ಮ ಪರಿಚಯ ಪತ್ರಗಳನ್ನೂ ಕಳುಹಿಸಿಕೊಟ್ಟಿದ್ದಾರಂತೆ. ನಾನು ಬಿಗ್ಬಾಸ್ ಮನೆ ಸೇರಲು ಅರ್ಹನಿದ್ದೇನೆ. ನನಗೆ ಇಂತಿಂಥಾ ಅರ್ಹತೆಗಳಿವೆ ಎಂದು ಗಂಭೀರವಾಗಿ ಅಭ್ಯರ್ಥಿಪತ್ರ ಸಲ್ಲಿಸಿರುವವರ ಜೊತೆಗೆ ತಮಾಷೆಯಾಗಿ ಮಾತಾಡಿದವರೂ ಇದ್ದಾರಂತೆ.
ನಾನು ಹುಚ್ಚ ವೆಂಕಟ್ಗಿಂತ ಜಾಸ್ತಿ ಮೆಂಟಲ್ಲು, ಪ್ರಥಮ್ಗಿಂತ ಜಾಸ್ತಿ ಕಿರಿಕ್ಕು, ಕೀರ್ತಿಗಿಂತ ಜಾಸ್ತಿ ತರಲೆ ಅಂತೆಲ್ಲ ಪತ್ರ ಬರೆದವರೂ ಆ ಪಟ್ಟಿಯಲ್ಲಿದ್ದಾರೆ.ಹಾಗಿದ್ದರೆ ಹೇಗೆ ಕಲರ್ಸ್ ಸಾಮಾನ್ಯರನ್ನು ಬಿಗ್ಬಾಸ್ ಮನೆಯೊಳಗೆ ಸೇರಿಸಿಕೊಳ್ಳಲಿದೆ. ಅದಕ್ಕೆ ಆಡಿಷನ್ ಇರುತ್ತಾ? ಈ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಬಿಗ್ಬಾಸ್ ಕನ್ನಡ ಸೀಸನ್-5ರಲ್ಲಿ ಭಾಗವಹಿಸಲು ಇಚ್ಚಿಸುವವರು
ಮಾಡಬೇಕಾದ್ದು ಇಷ್ಟೇ.
ಕಲರ್ಸ್ ಟೀವಿಯ ಅಧಿಕೃತ ವೆಬ್ಸೈಟ್'ನಲ್ಲೇ ಆಡಿಷನ್ ನಡೆಯಲಿದೆ. ಇಂದಿನಿಂದಲೇ ಆಡಿಷನ್ ಆರಂಭ. ಅಭ್ಯರ್ಥಿಗಳು ಈ ವೆಬ್ಸೈಟಿಗೆ ಹೋದರೆ ಅಲ್ಲಿ ಅವರಿಗೆ ಮೂರು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಭ್ಯರ್ಥಿ ತನ್ನ ಹೆಸರು, ತಾನು ಹೇಗೆ ಬಿಗ್ಬಾಸ್ ಮನೆ ಸೇರಲು ಅರ್ಹ, ತನ್ನ ವಿಶೇಷ ಅರ್ಹತೆಗಳೇನು ಅನ್ನುವುದನ್ನು ಬರೆಯಬೇಕು. ಜೊತೆಗೆ ಮೂರು ನಿಮಿಷದ ಆಡಿಯೋ ಶೂಟ್ ಮಾಡಿ ಕಳುಹಿಸಬೇಕು. ಅವುಗಳನ್ನು ನೋಡಿ, ಯಾರು ಅರ್ಹರೆನಿಸುತ್ತಾರೋ ಅವರನ್ನು ಬಿಗ್ಬಾಸ್ ಮನೆಗೆ ಆಯ್ಕೆ ಮಾಡಲಾಗುತ್ತದೆ.
ಎಂದಿನಂತೆ ಈ ಬಾರಿಯೂ ಸುದೀಪ್ ಬಿಗ್ಬಾಸ್ ಹೋಸ್ಟ್ ಮಾಡಲಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಇನ್ನೂ ಶುರುವಾಗಿಲ್ಲ. ಸೆಪ್ಟೆಂಬರ್ ಕೊನೆಯ ವಾರದಿಂದ ಜನವರಿ ತನಕ ಬಿಗ್ಬಾಸ್ ಸೀಸನ್ ಇರುತ್ತದೆ ಎಂಬ ಮಾಹಿತಿಯಿದೆ.
(ಕನ್ನಡಪ್ರಭ ವಾರ್ತೆ)
