ಮೊದಲವಾರವೇ ವಾಣಿಶ್ರೀ ಬಿಗ್ ಮನೆಯಿಂದ ಹೊರ ನಡೆದ ಮೇಲೆ ಹೊಸ ಅತಿಥಿ ಆಗಮನವಾಗಿದ್ದು, 'ವಾರದ ಕಥೆ ಕಿಚ್ಚನ ಜೊತೆ' ಮಾತನಾಡುವ ಸಂದರ್ಭದಲ್ಲೇ ಸುದೀಪ್ ಮತ್ತೊಂದು ಅಚ್ಚರಿಗೆ ಕಾಯ್ತಿರಿ ಅಂತ ಹೇಳಿದ್ರು, ಅದರಂತೆ ಮನೆಯೊಳಗೆ ನಿರ್ದೇಶಕ, ನಟ, ನಿರ್ಮಾಪಕ ಓಂ ಪ್ರಕಾಶ್ ರಾವ್ ಎಂಟ್ರಿ ಪಡೆದಿದ್ದಾರೆ. 

ಬೆಂಗಳೂರು(ಅ.17): ಅಬ್ಬಾ..! ಒಬ್ಬ ಸ್ಪರ್ಧಿ ಕಮ್ಮಿಯಾದರು ಅಂತ ಖುಷಿಯಾಗಿದ್ದ ಬಿಗ್ ಮನೆಯ ಸದಸ್ಯರಿಗೆ ಶನಿವಾರ ಮಧ್ಯರಾತ್ರಿ ಶಾಕ್ ಒಂದು ಕಾದಿತ್ತು. ನಡುರಾತ್ರಿಯಲ್ಲಿ ಲೈಟ್ ಆಫ್ ಆದ ಮೇಲೆ ಕತ್ತಲೆಯಲ್ಲಿ ಬಿಗ್ ಮನೆಗೆ ಮತ್ತೊಮ್ಮೆ ಸದಸ್ಯನ ಎಂಟ್ರಿಯಾಗಿತ್ತು. 

ಮೊದಲವಾರವೇ ವಾಣಿಶ್ರೀ ಬಿಗ್ ಮನೆಯಿಂದ ಹೊರನಡೆದ ಮೇಲೆ ಹೊಸ ಅತಿಥಿ ಆಗಮನವಾಗಿದ್ದು, 'ವಾರದ ಕಥೆ ಕಿಚ್ಚನ ಜೊತೆ' ಮಾತನಾಡುವ ಸಂದರ್ಭದಲ್ಲೇ ಸುದೀಪ್ ಮತ್ತೊಂದು ಅಚ್ಚರಿಗೆ ಕಾಯ್ತಿರಿ ಅಂತ ಹೇಳಿದ್ರು, ಅದರಂತೆ ಮನೆಯೊಳಗೆ ನಿರ್ದೇಶಕ, ನಟ, ನಿರ್ಮಾಪಕ ಓಂ ಪ್ರಕಾಶ್ ರಾವ್ ಎಂಟ್ರಿ ಪಡೆದಿದ್ದಾರೆ. 

ಪ್ರೋಮೊದಲ್ಲಿಯೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಬಿಗ್ ಬಾಸ್ ಕೊನೆಗೆ ಹೊಸ ಅತಿಥಿ ಮುಖ ತೋರಿಸಿದ್ದು, ಮನೆ ಇತರ ಸದಸ್ಯರಿಗೆ ಶಾಕ್ ನೀಡಿದೆ. ಒಂದು ಹಂತದಲ್ಲಿ ಈಗಾಗಲೇ ಬಿಗ್ ಮನೆಯಲ್ಲಿ ಕಾವು ಹೆಚ್ಚಾಗಿದ್ದು, ಓಂ ಆಗಮನದಿಂದ ಇದು ಮತ್ತಷ್ಟು ಹೆಚ್ಚಾಗಲಿದೆ.