ನಿಯಮದ ಪ್ರಕಾರ ಸೀಕ್ರೇಟ್ ರೂಮಿನಲ್ಲಿ ಬಿಗ್'ಬಾಸ್ ಮನೆಯಲ್ಲಿ ಸ್ಪರ್ಧಿಗಳು ಏನೇನು ಮಾಡುತ್ತಾರೆ ಎಂಬ ವಿಷಯ ತಿಳಿದು ಕೊಳ್ಳಲು ವ್ಯವಸ್ಥೆ ಮಾಡಿರಲಾಗುತ್ತದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್'ಬಾಸ್ -4ರ ರಿಯಾಲಿಟಿ ಶೋ ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮ ತೆರೆ ಬೀಳಲಿದೆ. ಆದರೆ ಮುಗಿಯುವುದಕ್ಕೂ ಮೊದಲು ದಿನಕ್ಕೊಂದು ತಿರುವು ಪಡೆದು ಕೊಳ್ಳುತ್ತಿದೆ. ಕಳೆದ ವಾರ ಇಬ್ಬರು ಪ್ರಬಲ ಸ್ಪರ್ಧಿಗಳಾದ ಮಾಳವೀಕ ಹಾಗೂ ಪ್ರಥಮ್ ಔಟ್ ಆಗಿದ್ದರು.
ಆದರೆ ಆವರನ್ನು ಸೀಕ್ರೇಟ್ ರೂಮಿಗೆ ಕಳುಹಿಸಲಾಗಿತ್ತು. ನಿಯಮದ ಪ್ರಕಾರ ಸೀಕ್ರೇಟ್ ರೂಮಿನಲ್ಲಿ ಬಿಗ್'ಬಾಸ್ ಮನೆಯಲ್ಲಿ ಸ್ಪರ್ಧಿಗಳು ಏನೇನು ಮಾಡುತ್ತಾರೆ ಎಂಬ ವಿಷಯ ತಿಳಿದು ಕೊಳ್ಳಲು ವ್ಯವಸ್ಥೆ ಮಾಡಿರಲಾಗುತ್ತದೆ. ಈ ಇಬ್ಬರು ಸ್ಪರ್ಧಿಗಳು ತಮ್ಮಿಬ್ಬರ ಬಗ್ಗೆ ಏನೇನು ಮಾತನಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಕೂಡ ಇವರಿಬ್ಬರ ಬಗ್ಗೆ ನಕಾರಾತ್ಮಕ ಧೋರಣೆಯನ್ನು ಹೊರ ಹಾಕುತ್ತಿದ್ದಾರೆ.
ಈ ವಿಷಯವನ್ನು ಕೇಳಿ ಇಬ್ಬರಿಂದಲೂ ಸಹಿಸಿಕೊಳ್ಳಲಾಗುತ್ತಿಲ್ಲ. ಅಲ್ಲದೆ ಇದೇ ವಿಷಯವಾಗಿ ಇಬ್ಬರಿಗೂ ಜಗಳವಾಗುತ್ತಿದೆ. ಜಗಳ ವಿಪರೀತವಾಗುತ್ತಿದೆ ಕೂಡ. ಬಿಗ್ ಬಾಸ್ ಮನೆಯಲ್ಲಿ ಏನೆ ನಡೆದರೂ ವೀಕ್ಷಕರಿಗೆ ಮಾತ್ರ ರಸದೌತಣ.
