ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಬಿಗ್'ಬಾಸ್ ಪ್ರಥಮ್

Big Boss Pratham Meet CM Siddaramaiah
Highlights

 ಪಕ್ಷದ‌ ಪರವಾಗಿ ಚುನಾವಣಾ ಪ್ರಚಾರ ಮಾಡುವ ಬಗ್ಗೆ ಸಿಎಂ ಏನು ಹೇಳಿಲ್ಲ. ಅವರು ಒಬ್ಬರು ಅದ್ಭುತ ವ್ಯಕ್ತಿ. ಅವರು ಏನೇ ಹೇಳಿದರೂ ಕೇಳುತ್ತೇನೆ 'ಎಂದು ಪರೋಕ್ಷವಾಗಿ ಪ್ರಚಾರಕ್ಕೆ ಬೆಂಬಲ ಕೊಡುವುದಾಗಿ ಹೇಳಿದರು.

ಬೆಂಗಳೂರು(ಏ.05): ಕಳೆದ ಬಾರಿಯ ರಿಯಾಲಿಟಿ ಶೋ ಬಿಗ್ ಬಾಸ್ ವಿಜೇತ ಪ್ರಥಮ್ ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.

ತಮ್ಮ ನಟನೆಯ ಎಂಎಲ್ಎ ಸಿನಿಮಾದ ಧ್ವನಿಸುರುಳಿ ಸಮಾರಂಭಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಈ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಿನಿಮಾ ಆಡಿಯೋ ಬಿಡುಗಡೆಗೆ ಬರುವಂತೆ ಸಿಎಂ ಅವರಿಗೆ ಆಹ್ವಾನಿಸಿದ್ದೇನೆ.ಬಿಡುವಾದರೆ ಸಮಾರಂಭಕ್ಕೆ ಬರುವುದಾಗಿ ಭರವಸೆ ನೀಡಿದ್ದಾರೆ. ಪಕ್ಷದ‌ ಪರವಾಗಿ ಚುನಾವಣಾ ಪ್ರಚಾರ ಮಾಡುವ ಬಗ್ಗೆ ಸಿಎಂ ಏನು ಹೇಳಿಲ್ಲ. ಅವರು ಒಬ್ಬರು ಅದ್ಭುತ ವ್ಯಕ್ತಿ. ಅವರು ಏನೇ ಹೇಳಿದರೂ ಕೇಳುತ್ತೇನೆ 'ಎಂದು ಪರೋಕ್ಷವಾಗಿ ಪ್ರಚಾರಕ್ಕೆ ಬೆಂಬಲ ಕೊಡುವುದಾಗಿ ಹೇಳಿದರು.

ಕುಮಾರಸ್ವಾಮಿ, ದೇವೇಗೌಡ, ಯಡಿಯೂರಪ್ಪ ಕೂಡ ಒಳ್ಳೆಯವರು. ಆಗಂತ ಅವರ ಜೊತೆಗಿರುವ ಕೆಟ್ಟ ವ್ಯಕ್ತಿಗಳಿಗೆ ನಾನು ಬೆಂಬಲ ನೀಡುವುದಿಲ್ಲ. ಪಕ್ಷ ನೋಡಿ ಕೆಲಸ ಮಾಡಲ್ಲ. ಒಳ್ಳೆಯ ವ್ಯಕ್ತಿಗಳನ್ನು ನೋಡಿ ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದರು.

loader