ಈ ವಾರದ ಕೊನೆಯ ವೇಳೆಗೆ ಚಂದನ್, ಜೆಕೆ, ನಿವೇದಿತಾ,ಸಮೀರ್, ಶೃತಿ ಹಾಗೂ ರಿಯಾಜ್ ಉಳಿದುಕೊಂಡಿದ್ದರು

ಬಿಗ್'ಬಾಸ್ ಗ್ರಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿಯುಳಿದಿರುವ ಬೆಳವಣಿಗೆಯ ಹಿನ್ನಲೆಯಲ್ಲಿ ವೀಕ್ಷಕರಿಗೆ ಒಂದು ಅಚ್ಚರಿಯ ಸುದ್ದಿ ಎದುರಾಗಿದೆ. ಈ ಆವೃತ್ತಿಯಲ್ಲಿ ಚೆನ್ನಾಗಿ ಆಟವಾಡಿಕೊಂಡು ಬರುತ್ತಿದ್ದ ಹಾಗೂ ತಮ್ಮ ಪಾಡಿಗೆ ತಾವಿರುತ್ತಿದ್ದ ಸ್ಪರ್ಧಿಯೊಬ್ಬರು ಔಟಾಗಿದ್ದಾರೆ ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

14ನೇ ವಾರದ ಶೋನಲ್ಲಿ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದ್ದ ಸ್ಪರ್ಧಿ ರಿಯಾಜ್ ಪಾಷ ಔಟಾಗಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡುತ್ತಿದ್ದು, ಅವರು ಮನೆಯಿಂದ ಹೊರ ಬಂದಿರುವುದಾಗಿ ಇನ್ನೊಂದಿಷ್ಟು ಮೂಲಗಳು ಹೇಳುತ್ತಿವೆ.

ಈ ವಾರದ ಕೊನೆಯ ವೇಳೆಗೆ ಚಂದನ್, ಜೆಕೆ, ನಿವೇದಿತಾ,ಸಮೀರ್, ಶೃತಿ ಹಾಗೂ ರಿಯಾಜ್ ಉಳಿದುಕೊಂಡಿದ್ದರು. ಈ ವಾರ ರಿಯಾಜ್ ಔಟಾಗುವುದಿಲ್ಲ ಎಂಬುದು ಬಹುತೇಕ ವೀಕ್ಷಕರ ಅಭಿಪ್ರಾಯವಾಗಿತ್ತು. ಎಸ್'ಎಂಎಸ್ ಒಂದಿಷ್ಟು ಕಡಿಮೆ ಮತಗಳು ಬಂದ ಕಾರಣ ರಿಯಾಜ್ ಅವರೇ ಔಟಾಗಿದ್ದಾರೆ ಎನ್ನಲಾಗುತ್ತಿದೆ. ಅಧಿಕೃತ ತ್ತರ ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.