'ಕೃಷ್ಣ ಅಂಡ್ ಹಿಸ್ ಲೀಲಾ' ಖ್ಯಾತಿಯ ಸ್ಟಾರ್‌ಬಾಯ್ ಸಿದ್ದು ಜೊನ್ನಲಗಡ್ಡ ಮತ್ತು ನಿರ್ದೇಶಕ ರವಿಕಾಂತ್ ಪೇರೆಪು ಮತ್ತೆ ಒಂದಾಗಿದ್ದಾರೆ. ಈ ಬಾರಿ 'ಬ್ಯಾಡ್ ಆ್ಯಸ್' ಎಂಬ ಕ್ರೇಜಿ ಚಿತ್ರದೊಂದಿಗೆ ಬರ್ತಿದ್ದಾರೆ.

'ಕೃಷ್ಣ ಅಂಡ್ ಹಿಸ್ ಲೀಲಾ' ಖ್ಯಾತಿಯ ಸ್ಟಾರ್‌ಬಾಯ್ ಸಿದ್ದು ಜೊನ್ನಲಗಡ್ಡ ಮತ್ತು ನಿರ್ದೇಶಕ ರವಿಕಾಂತ್ ಪೇರೆಪು ಮತ್ತೆ ಒಂದಾಗಿದ್ದಾರೆ. ಈ ಬಾರಿ 'ಬ್ಯಾಡಾಸ್' ಎಂಬ ಕ್ರೇಜಿ ಚಿತ್ರದೊಂದಿಗೆ ಬರ್ತಿದ್ದಾರೆ. ಶ್ರೀಕರ ಸ್ಟುಡಿಯೋಸ್ ಸಮರ್ಪಣೆಯಲ್ಲಿ ಸಿತಾರ ಎಂಟರ್‌ಟೈನ್‌ಮೆಂಟ್ಸ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಈ ಚಿತ್ರವನ್ನು ನಿರ್ಮಿಸುತ್ತಿವೆ. ಈ ಚಿತ್ರ ಸಿದ್ದು ಅವರನ್ನು ನಾವು ಇದುವರೆಗೆ ನೋಡಿರದ ಹೊಸ ಲೋಕಕ್ಕೆ ಕರೆದೊಯ್ಯುತ್ತದೆ.

ಸಿದ್ದು ಜೊನ್ನಲಗಡ್ಡ ಒಬ್ಬ ಉತ್ತಮ ನಟ ಮಾತ್ರವಲ್ಲ, ಪ್ರತಿಭಾವಂತ ಬರಹಗಾರ ಕೂಡ. 'ಬ್ಯಾಡ್ ಆ್ಯಸ್' ಚಿತ್ರಕ್ಕೆ ರವಿಕಾಂತ್ ಪೇರೆಪು ಜೊತೆಗೆ ಸಿದ್ದು ಜೊನ್ನಲಗಡ್ಡ ಕೂಡ ಬರಹಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರವಿಕಾಂತ್ ನಿರ್ದೇಶನ ಮಾಡುತ್ತಿದ್ದಾರೆ.

ಟಿಲ್ಲು ಪಾತ್ರದ ಮೂಲಕ ಮನರಂಜನೆ ನೀಡಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿರುವ ಸಿದ್ದು ಜೊನ್ನಲಗಡ್ಡ ಈಗ 'ಬ್ಯಾಡ್ ಆ್ಯಸ್'ನಲ್ಲಿ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದುವರೆಗೆ ನೋಡಿರದ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ, ಪಕ್ವವಾದ ಅಭಿನಯದಿಂದ ಮನಸೆಳೆಯಲಿದ್ದಾರೆ.

View post on Instagram

ನಿರ್ಮಾಪಕರು ಶೀರ್ಷಿಕೆಯೊಂದಿಗೆ ಅದ್ಭುತವಾದ ಫಸ್ಟ್ ಲುಕ್ 'ಬ್ಯಾಡ್ ಆ್ಯಸ್' ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ. “If middle finger was a man” ಎಂಬ ದಿಟ್ಟ ಹೇಳಿಕೆಯೊಂದಿಗೆ ಈಗಾಗಲೇ ಈ ಚಿತ್ರದ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ನೀವು ಹೀರೋಗಳು ಮತ್ತು ವಿಲನ್‌ಗಳನ್ನು ನೋಡಿರಬಹುದು. ಆದರೆ ಇವನು ಅವರಿಗಿಂತ ಮಿಗಿಲು ಎಂದು ಚಿತ್ರತಂಡ ಸಿದ್ದು ಜೊನ್ನಲಗಡ್ಡಗೆ ಎಲಿವೇಷನ್ ಕೊಡುತ್ತಿದೆ.

ಇತ್ತೀಚಿನ ದಿನಗಳಲ್ಲಿ ಚಿತ್ರದ ಮೊದಲ ಕಂಟೆಂಟ್‌ನಿಂದಲೇ ಪ್ರೇಕ್ಷಕರನ್ನು ಆಕರ್ಷಿಸುವುದು ಸುಲಭದ ಮಾತಲ್ಲ. ಆದರೆ, 'ಬ್ಯಾಡ್ ಆ್ಯಸ್' ಚಿತ್ರತಂಡ ಮೊದಲ ಪ್ರಯತ್ನದಲ್ಲೇ ಎಲ್ಲರ ಗಮನ ಸೆಳೆದಿದೆ ಮತ್ತು ಮೆಚ್ಚುಗೆ ಗಳಿಸಿದೆ.

ಬಲವಾದ ಕಥೆ, ದೊಡ್ಡ ಬಜೆಟ್‌ನೊಂದಿಗೆ ನಿರ್ಮಾಣವಾಗುತ್ತಿರುವ 'ಬ್ಯಾಡ್ ಆ್ಯಸ್' ಚಿತ್ರವು ನಿರೀಕ್ಷೆ ಮೀರಿ ಯಶಸ್ಸು ಗಳಿಸುತ್ತದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ. ಈ ಚಿತ್ರವನ್ನು 2026 ರಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

'ಬ್ಯಾಡ್ ಆ್ಯಸ್' ಚಿತ್ರವನ್ನು ಸೂರ್ಯದೇವರ ನಾಗವಂಶಿ ಮತ್ತು ಸಾಯಿ ಸೌಜನ್ಯ ನಿರ್ಮಿಸುತ್ತಿದ್ದಾರೆ. ಸಿದ್ದು ಜೊನ್ನಲಗಡ್ಡ ಜೊತೆ 'ಡೀಜೆ ಟಿಲ್ಲು', 'ಟಿಲ್ಲು ಸ್ಕ್ವೇರ್' ನಂತಹ ಭರ್ಜರಿ ಯಶಸ್ಸಿನ ನಂತರ ಅವರ ನಿರ್ಮಾಣದಲ್ಲಿ ಬರುತ್ತಿರುವ ಮೂರನೇ ಚಿತ್ರ ಇದಾಗಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ವಿವರಗಳು ಶೀಘ್ರದಲ್ಲೇ ಲಭ್ಯವಾಗಲಿವೆ. ಸಿದ್ದು ಜೊನ್ನಲಗಡ್ಡ ಅವರ ಕೊನೆಯ ಚಿತ್ರ 'ಜಾಕ್' ವಿಫಲವಾಗಿದ್ದು ಗೊತ್ತೇ ಇದೆ.