ಹೀಗೊಂದು ಕುತೂಹಲಕ್ಕೆ ಕಾರಣವಾಗಿದ್ದು ಬೆಳಗಾವಿಯ ಸುಜಾತ. ಈಗಾಗಲೇ 13 ನೇ ಪ್ರಶ್ನೆಗೆ ಉತ್ತರಿಸಿ 25 ಲಕ್ಷ ರೂ. ಗೆದ್ದಿದ್ದಾರೆ ಸುಜಾತ. ಮುಂದಿನದು 14ನೇ ಪ್ರಶ್ನೆ. ಅದಕ್ಕೆ ಸರಿಯಾದ ಉತ್ತರ ನೀಡಿದ್ರೆ ಬರೋಬ್ಬರಿ ೫೦ ಲಕ್ಷ ರೂ. ಬಹುಮಾನ. ಅಲ್ಲಿಂದ ಮುಂದಿನದು 15ನೇ ಅಂದ್ರೆ ಕೊನೆಯ ಪ್ರಶ್ನೆ. ಅದು ಕೋಟಿ ಗೆಲ್ಲುವ ಅವಕಾಶ. ಸಾಕಷ್ಟು ಕುತೂಹಲದ ತಿರುವಿನಲ್ಲಿ ಕುಳಿತಿದ್ದಾರೆ ಸುಜಾತ. ಅಂದುಕೊಂಡಂತೆ ಅವರು ಕೋಟಿ ಗೆಲ್ತಾರೋ ಇಲ್ಲವೋ ಅನ್ನುವುದು ಗುರುವಾರ ಜುಲೈ 12ರ ರಾತ್ರಿ 8 ಗಂಟೆಗೆ ಗೊತ್ತಾಗಲಿದೆ. ಮುದ್ದಾದ ಅವಳಿ ಮಕ್ಕಳ ತಾಯಿ ಸುಜಾತ ಬಿಎ ಪದವೀಧರೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಚಿನ್ನದ ಹುಡುಗಿ. ಬಿಎ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದು ಚಿನ್ನದ ಪದಕ ಗಳಿಸಿದ ಖ್ಯಾತಿ. ಮುಂದೊಂದು ದಿನ ಕೆಎಎಸ್ ಮುಗಿಸಿ, ಅಧಿಕಾರಿಯಾಗುವ ಕನಸು ಹೊತ್ತಿದ್ದಾರೆ.