Asianet Suvarna News Asianet Suvarna News

ಬಾಹುಬಲಿ ಪ್ರಭಾಸ್ ತಿರಸ್ಕರಿಸಿದ ಮದುವೆ ಪ್ರೊಪೋಸಲ್ಸ್ ಎಷ್ಟು ಗೊತ್ತಾ?

ಬಾಹುಬಲಿ-2 ಸಿನಿಮಾಕ್ಕೋಸ್ಕರ ತಮ್ಮೆಲ್ಲಾ ಸಮಯ ಮತ್ತು ಗಮನವನ್ನು ಮುಡಿಪಾಗಿಟ್ಟ ಪ್ರಭಾಸ್, ತಮಗೆ ಬಂದ ಅಷ್ಟೂ ಮದುವೆ ಪ್ರೊಪೋಸಲ್'ಗಳನ್ನು ಮುಲಾಜಿಲ್ಲದೇ ತಿರಸ್ಕರಿಸಿದ್ದಾರೆ. ಈಗ ಸಿನಿಮಾ ರಿಲೀಸ್ ಆಗಿದೆ. ಬಾಹುಬಲಿ ಫಿವರ್'ನಿಂದ ತಪ್ಪಿಸಿಕೊಂಡು ರಿಲ್ಯಾಕ್ಸ್ ಆಗಲು ಪ್ರಭಾಸ್ ವಿದೇಶಕ್ಕೆ ಹೋಗಿದ್ದಾರೆ. ಈಗ ಅವರ ಮನಸ್ಸು ಮದುವೆಯ ಕಡೆ ತಿರುಗಬಹುದು. ಅವರ ದೊಡ್ಡಪ್ಪ ಕೃಷ್ಣಂರಾಜು ಹೇಳುವ ಪ್ರಕಾರ ಪ್ರಭಾಸ್ ಶೀಘ್ರದಲ್ಲೇ ಗೃಹಸ್ಥಾಶ್ರಮ ಪ್ರವೇಶಿಸಲಿದ್ದಾರಂತೆ.

bahubali hero prabhas said to have rejected 6000 marriage proposals
  • Facebook
  • Twitter
  • Whatsapp

ಹೈದರಾಬಾದ್(ಮೇ 07): ಬಾಹುಬಲಿ-2 ಸಿನಿಮಾ ಹೊಸ ಇತಿಹಾಸ ನಿರ್ಮಿಸಿ ಮುನ್ನುಗ್ಗುತ್ತಿದೆ. ನಾಯಕ ನಟ ಪ್ರಭಾಸ್ ಅವರ ಅಭಿನಯ ಮತ್ತು ಕಾರ್ಯಕ್ಷಮತೆ ಸಾಕಷ್ಟು ಜನರ ಹುಬ್ಬೇರಿಸಿದೆ. ಬಾಲಿವುಡ್'ನ ಟಾಪ್ ಡೈರೆಕ್ಟರ್ ಕರಣ್ ಜೋಹರ್ ಅವರಂತೂ ಪ್ರಭಾಸ್'ರನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾರೆ. 6.2 ಅಡಿ ಎತ್ತರದ ಪ್ರಭಾಸ್ ಅವರಂತೂ ಸದ್ಯಕ್ಕೆ ಟಾಲಿವುಡ್'ನ ಮೋಸ್ಟ್ ಎಲಿಜಿಬಲ್ ಬ್ಯಾಚಲರ್ ಆಗಿದ್ದಾರೆ. ಬಾಹುಬಲಿ-1 ಸಿನಿಮಾ ಬಿಡುಗಡೆ ಬಳಿಕ ಪ್ರಭಾಸ್'ಗೆ ಲೆಕ್ಕವಿಲ್ಲದಷ್ಟು ಮದುವೆ ಪ್ರೊಪೋಸಲ್'ಗಳು ಬಂದಿವೆಯಂತೆ. ಅವರ ಕುಟುಂಬದ ಮೂಲಗಳು ಹೇಳುವ ಪ್ರಕಾರ 6 ಸಾವಿರದಷ್ಟು ಮ್ಯಾರೇಜ್ ಪ್ರೊಪೋಸಲ್ಸ್ ಬಂದಿವೆ. ಬಾಹುಬಲಿ-2 ಸಿನಿಮಾಕ್ಕೋಸ್ಕರ ತಮ್ಮೆಲ್ಲಾ ಸಮಯ ಮತ್ತು ಗಮನವನ್ನು ಮುಡಿಪಾಗಿಟ್ಟ ಪ್ರಭಾಸ್, ತಮಗೆ ಬಂದ ಅಷ್ಟೂ ಮದುವೆ ಪ್ರೊಪೋಸಲ್'ಗಳನ್ನು ಮುಲಾಜಿಲ್ಲದೇ ತಿರಸ್ಕರಿಸಿದ್ದಾರೆ. ಈಗ ಸಿನಿಮಾ ರಿಲೀಸ್ ಆಗಿದೆ. ಬಾಹುಬಲಿ ಫಿವರ್'ನಿಂದ ತಪ್ಪಿಸಿಕೊಂಡು ರಿಲ್ಯಾಕ್ಸ್ ಆಗಲು ಪ್ರಭಾಸ್ ವಿದೇಶಕ್ಕೆ ಹೋಗಿದ್ದಾರೆ. ಈಗ ಅವರ ಮನಸ್ಸು ಮದುವೆಯ ಕಡೆ ತಿರುಗಬಹುದು. ಅವರ ದೊಡ್ಡಪ್ಪ ಕೃಷ್ಣಂರಾಜು ಹೇಳುವ ಪ್ರಕಾರ ಪ್ರಭಾಸ್ ಶೀಘ್ರದಲ್ಲೇ ಗೃಹಸ್ಥಾಶ್ರಮ ಪ್ರವೇಶಿಸಲಿದ್ದಾರಂತೆ.

ಅನುಷ್ಕಾ ಜೊತೆ ಮದುವೆ?
ಬಾಹುಬಲಿ ಸಿನಿಮಾ ಚಿತ್ರೀಕರಣದ ವೇಳೆ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮಧ್ಯೆ ಸಂಥಿಂಗ್, ಸಂಥಿಂಗ್ ಇದೆ ಎಂಬ ಗಾಸಿಪ್ ಟಾಲಿವುಡ್'ನಲ್ಲಿ ಬಲವಾಗಿ ಕೇಳಿಬರುತ್ತಿತ್ತು. ಬಾಹುಬಲಿ-2 ಸಿನಿಮಾ ಬಿಡುಗಡೆ ಬಳಿಕ ಅವರಿಬ್ಬರೂ ಮದುವೆಯಾಗುತ್ತಾರೆ ಎಂದೂ ಹೇಳಲಾಗುತ್ತಿತ್ತು. ಇದೀಗ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದು ಗಲ್ಲಾಪೆಟ್ಟಿಗೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಈಗ ಪ್ರಭಾಸ್ ತಮ್ಮ ಭವಿಷ್ಯದ ಜೀವನದ ಬಗ್ಗೆ ಏನು ನಿರ್ಧಾರ ಕೈಗೊಳ್ಳುತ್ತಾರೆ? ಕನ್ನಡದ ಚೆಲುವೆ ಅನುಷ್ಕಾರನ್ನು ಮದುವೆಯಾಗುತ್ತಾರಾ ಎಂದು ಕಾದುನೋಡಬೇಕು.

Follow Us:
Download App:
  • android
  • ios