ಬಾಹುಬಲಿ ಖ್ಯಾತಿಯ ಪ್ರಭಾಸ್ ಮದ್ವೆಗೆ ಒಪ್ಪಿಕೊಂಡಿದ್ದಾರಂತೆ!

First Published 20, Jan 2018, 3:13 PM IST
Baahubali Prabhas marriage to be fixed soon
Highlights

ಪ್ರಭಾಸ್ ಅಂತೂ ಇಂತೂ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರಂತೆ. ಅಷ್ಟಕ್ಕೂ ಯಾರ ಜತೆ?

ಬಾಹುಬಲಿಯ ಕಥೆ, ನಟನೆ, ಆಂಗಿಕ ಭಾಷೆ...ಹೀಗೆ ವಿವಿಧ ಕಾರಣಗಳಿಂದ ಈ ಚಿತ್ರ ಬಂದಾಗಿನಿಂದ  ಪ್ರಭಾಸ್ ಕೇವಲ ಟಾಲಿವುಡ್‌ನಲ್ಲಿ ಮಾತ್ರವಲ್ಲ, ದೇಶದಲ್ಲಿಯೇ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. 

ಚಿತ್ರರಂಗದಲ್ಲಿ ಮಾತ್ರ ಅವರ ಬೇಡಿಕೆ ಹೆಚ್ಚಾಗಿದ್ದಲ್ಲ, ಹೆಂಗಳೆಯರ ಮನ ಕದ್ದು, ಮದುವೆ ಪ್ರಪೋಸಲ್ ಬರೋದು ಹೆಚ್ಚಾಗಿದೆ. ಈ ಬೆನ್ನಲ್ಲೇ, ಬಾಹುಬಲಿಯ ಸಹ ನಟಿ ಅನುಷ್ಕಾ ಶೆಟ್ಟಿಯವರನ್ನೇ ವರಿಸಲಿದ್ದಾರೆಂಬ ಸುದ್ದಿಯೂ ಎಲ್ಲೆಡೆ ಹರಿದಾಡುತ್ತಲೇ ಇದೆ.

ಈ ಸುದ್ದಿಯನ್ನು ಪ್ರಭಾಸ್ ಅಲ್ಲಗಳೆದರೆ, 'ನಮ್ಮಿಬ್ಬರದ್ದು ಕೇವಲ ಸ್ನೇಹ ಮಾತ್ರ. ಆದರೆ, ಸಹೋದರ ಭಾವನೆ ಇಲ್ಲ,' ಎನ್ನುವ ಮೂಲಕ ಪ್ರಭಾಸ್ ಅವರೊಂದಿಗಿನ ಮದುವೆ ಸುದ್ದಿಗೆ ಇತ್ತೀಚೆಗೆ ಅನುಷ್ಕಾ ಶರ್ಮಾ ತೆರೆ ಎಳೆದಿದ್ದಾರೆ.

ಈ ಮೊದಲು ಬಾಹುಬಲಿ ಮುಗಿದ ನಂತರ ಸಪ್ತಪದಿ ತುಳಿಯುತ್ತೇನೆ ಎಂದಿದ್ದವರು ಇದೀಗ ಸಾಹೋ ಮುಗಿದ ನಂತರ ಮದುವೆ ಎಂದು ಪ್ರಭಾಸ್ ಹೇಳುತ್ತಿದ್ದಾರಂತೆ. ಆದರೆ, ಮದುವೆ ಆಗಬೇಕೆಂಬ ಆಸಕ್ತಿ ತೋರುತ್ತಿದ್ದು, ಮದುವೆ ಆಗಲಿದ್ದಾನೆ, ಎಂದು ಅವರ ಅಂಕಲ್, ಟಾಲಿವುಡ್‌ನ ಪ್ರಸಿದ್ಧ ನಟರಲ್ಲಿ ಒಬ್ಬರಾದ ಕೃಷ್ಣಮ್ ರಾಜು ಹೇಳಿದ್ದಾರೆ. ಆದರೆ, ಅದ್ಯಾವಾಗ ಮದುವೆ ಆಗ್ತಾನೋ ಗೊತ್ತಿಲ್ಲವೆಂದೂ ಹೇಳಿದ್ದಾರೆ.

 

loader