ಆಫರ್‌ಗೋಸ್ಕರ ವಲ್ಗರ್ ಆಗೋಲ್ವಂತೆ ಈ ನಟಿ...?

Ashika Ranganath does not like to be valgar for an offer
Highlights

ಆಶಿಕಾ ರಂಗನಾಥ್ ಸುದ್ದಿಯಲ್ಲಿದ್ದಾರೆ. ತೆರೆ ಮೇಲೆ ಇಷ್ಟು ದಿನ ಹೋಮ್ಲಿ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ನಟಿಯೀಗ ಗ್ಲಾಮರ್ ಡಾಲ್ ಆಗ್ತಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ. ಇಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು  'ರ‍್ಯಾಂಬೋ 2' ಚಿತ್ರದಲ್ಲಿನ ಅವರ ಗ್ಲಾಮರಸ್ ಲುಕ್! 

ಆಶಿಕಾ ರಂಗನಾಥ್ ಸುದ್ದಿಯಲ್ಲಿದ್ದಾರೆ. ತೆರೆ ಮೇಲೆ ಇಷ್ಟು ದಿನ ಹೋಮ್ಲಿ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ನಟಿಯೀಗ ಗ್ಲಾಮರ್ ಡಾಲ್ ಆಗ್ತಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ. ಇಷ್ಟಕ್ಕೂ ಇದಕ್ಕೆ ಕಾರಣವಾಗಿದ್ದು  'ರ‍್ಯಾಂಬೋ 2' ಚಿತ್ರದಲ್ಲಿನ ಅವರ ಗ್ಲಾಮರಸ್ ಲುಕ್! 

ಶರಣ್ ಅಭಿನಯ ಹಾಗೂ ಅನಿಲ್ ಕುಮಾರ್ ನಿರ್ದೇಶನದಲ್ಲಿ ರಿಲೀಸ್‌ಗೆ ರೆಡಿಯಾಗಿರುವ 'ರ‍್ಯಾಂಬೋ 2' ಈಗ ಹಾಡುಗಳ ಮೂಲಕ ಸುದ್ದಿಯಲ್ಲಿದೆ. ಇದಕ್ಕೂ ಮೊದಲು ಅದು ಕುತೂಹಲ ಮೂಡಿಸಿದ್ದು ನಟಿ ಆಶಿಕಾ ಹಾಟ್ ಲುಕ್ ಮೂಲಕ. 

ಅದರಲ್ಲೂ ಈ ಚಿತ್ರದಲ್ಲಿನ 'ಚುಟು..ಚುಟು' ಹಾಡಿನಲ್ಲಿ ಶರಣ್ ಹಾಗೂ ಆಶಿಕಾ ರಂಗನಾಥ್ ಮೈ ಚಳಿ ಬಿಟ್ಟು ಕುಣಿದಿದ್ದಾರೆ. ಸಿನಿರಸಿಕರಲ್ಲಿ ಇದು ದೊಡ್ಡದೊಂದು ಕ್ರೇಜ್ ಹುಟ್ಟಿಸಿದೆ. ವಿಶೇಷವಾಗಿ ಇಲ್ಲಿ ಪಡ್ಡೆಗಳ ಕಣ್ಣು ಕುಕ್ಕುವಂತೆ ಮಾಡಿದ್ದು ಆಶಿಕಾ ಕಾಸ್ಟ್ಯೂಮ್. 

ಚಿತ್ರದ ಫಸ್ಟ್ ಲುಕ್‌ನಲ್ಲೂ ಆಶಿಕಾ ಇಷ್ಟೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಅಲ್ಲಿಂದಲೇ ಶುರುವಾಗಿದ್ದು ಪಕ್ಕದ್ಮನೆ ಹುಡುಗಿಯಂತಿದ್ದ ನಟಿ ಆಶಿಕಾ ರಂಗನಾಥ್ ಗ್ಲಾಮರ್ ಡಾಲ್ ಆಗ್ತಿದ್ದಾರೆನ್ನುವ ಶಂಕೆ. ಈ ಬಗ್ಗೆ ಆಶಿಕಾ ಹೇಳಿದ್ದಿಷ್ಟು:

- ಆಕೆ ಗೋವಾದ ಮಧ್ಯಮ ವರ್ಗದ ಹುಡುಗಿ. ಹೆಸರು ಮಯೂರಿ. ಅಲ್ಲಿನ ಕಲ್ಚರ್‌ಗೆ ತಕ್ಕಂತೆ ಸಿಕ್ಕಾಪಟ್ಟೆ ಬೋಲ್ಡ್ . ಹಾಗೆನೇ ಆಕೆ ಹೈಫೈ. ತನಗೆ ಅನಿಸಿದಂತೆ ಸ್ವತಂತ್ರವಾಗಿ ಬದುಕುವ ಹಠವಾದಿ. ಹಾಗಾಗಿ ಆ ಪಾತ್ರಕ್ಕೆ ತಕ್ಕಂತೆ ಉಡುಗೆ-ತೊಡುಗೆಯಲ್ಲೂ ಸ್ವಲ್ಪ ಮಾಡರ್ನ್ ಲುಕ್ ಇದೆ. 

- ಯಾವುದನ್ನು ಗೊತ್ತಿಲ್ಲದೆ ನಾನು ಒಪ್ಪಿಕೊಂಡಿಲ್ಲ. ಚಿತ್ರದ ಕತೆ ಕೇಳುವಾಗಲೇ ನಿರ್ದೇಶಕರು ಪಾತ್ರದ ಬಗ್ಗೆ ಡಿಟೈಲ್ಸ್ ಮಾಹಿತಿ ಕೊಟ್ಟಿದ್ದರು. 'ಈ ತನಕ ನೀವು ಹೋಮ್ಲಿ ಲುಕ್‌ನಲ್ಲಿಯೇ ಹೆಚ್ಚಾಗಿ ಕಾಣಿಸಿಕೊಂಡಿದ್ದೀರಿ. ಆದ್ರೆ ಈ ಚಿತ್ರದಲ್ಲಿನ ನಿಮ್ಮ ಪಾತ್ರದ ಮೇಕ್ ಒವರ್ ಕಂಪ್ಲೀಟ್ ಬೇರೆಯೇ ಇರುತ್ತೆ. ಆಕೆ ಗ್ಲಾಮರಸ್ ಹುಡುಗಿ. ಅದಕ್ಕೆ ತಕ್ಕಂತೆ ಕಾಸ್ಟ್ಯೂಮ್ ಡಿಸೈನ್ ಮಾಡಲಾಗುತ್ತೆ' ಅಂದಿದ್ದರು. ಆಗಲೇ ನಾನು ಕಾಸ್ಟ್ಯೂಮ್ ಬಗ್ಗೆಯೂ ಚರ್ಚಿಸಿದ್ದೆ. ಅದಕ್ಕೆ ತಕ್ಕಂತೆಯೇ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನನಗೂ ಖುಷಿ ಕೊಟ್ಟಿದೆ. 

- ಸಿನಿಮಾ ಅಂದ್ಮೇಲೆ ಗ್ಲಾಮರ್ ಇದ್ದೇ ಇರುತ್ತೆ. ಹಾಗಂತ ವಲ್ಗರ್ ಆಗಿ ಕಾಣಿಸಿಕೊಳ್ಳುವುದು ಸರಿಯಲ್ಲ. ಅದು ಆರೋಗ್ಯಕರ ಬೆಳವಣಿಗೆಯೂ ಅಲ್ಲ. ಈ ಪಾತ್ರ ಒಪ್ಪಿಕೊಳ್ಳುವ ಮುಂಚೆ ಅಪ್ಪ, ಅಮ್ಮ ಮತ್ತು ನಾನು ಅಷ್ಟು ಜನ ಕುಳಿತೇ ಕತೆ ಕೇಳಿದ್ದು. ಈ ಪಾತ್ರದಲ್ಲಿನ ಕಾಸ್ಟ್ಯೂಮ್ ಬಗ್ಗೆ ಅವರದ್ದೇನು ತಕರಾರು ಇರಲಿಲ್ಲ. ಯಾಕಂದ್ರೆ ವಲ್ಗರ್ ಅನ್ನುವಂಥದ್ದೇನು ಅಲ್ಲಿರಲಿಲ್ಲ. ಅಪ್ಪ, ಅಮ್ಮ ಓಕೆ ಅಂದ್ಮೇಲೆಯೇ ನಾನು ಈ ಪಾತ್ರ ಒಪ್ಪಿಕೊಂಡಿದ್ದು.

- ಗ್ಲಾಮರಸ್ ಆಗಿ ಕಾಣಿಸಿಕೊಂಡ್ರೆ ಹೆಚ್ಚು ಅವಕಾಶ ಸಿಗುತ್ತೆ ಅನ್ನೋದನ್ನು ನಾನು ಒಪ್ಪಲಾರೆ. ನನ್ನ ಇಲ್ಲಿ ತನಕದ ಜರ್ನಿಯಲ್ಲಿ ಸಿಕ್ಕ ಅವಕಾಶಗಳು ಗ್ಲಾಮರ್ ನೋಡಿ ಬಂದಿಲ್ಲ. ನನ್ನ ಕರಿಯರ್ ಶುರುವಾಗಿದ್ದೇ ಹೋಮ್ಲಿ ಪಾತ್ರದ ಮೂಲಕ. ಅದು ಹಾಗೆಯೇ ಮುಂದುವರೆಯುತ್ತಾ ಬಂತು. ನಾಲ್ಕೈದು ಸಿನಿಮಾಗಳಾದ್ಮೇಲೆ ಇಲ್ಲಿ ಇಂಥದ್ದೊಂದು ಪಾತ್ರ ಸಿಕ್ಕಿದೆ. ಒಂದು ಇತಿ-ಮಿತಿಯೊಳಗೆ ಗ್ಲಾಮರಸ್ ಪಾತ್ರದಲ್ಲೂ ಕಾಣಿಸಿಕೊಳ್ಳುವ ಆಸೆ ನನಗೂ ಇತ್ತು. ಇದು ಎಲ್ಲಾ ರೀತಿಯ ಪಾತ್ರದಲ್ಲೂ ನನ್ನನ್ನು ನಾನು ಗುರುತಿಸಿಕೊಳ್ಳಬೇಕೆನ್ನುವ ತವಕ ಮಾತ್ರ. ಹಾಗಂತ ಹೆಚ್ಚು ಹೆಚ್ಚು ಅವಕಾಶ ಪಡೆಯಬೇಕು ಅನ್ನೋದಲ್ಲ. ಅವಕಾಶ ಸಿಗದಿದ್ದರೂ ಪರವಾಗಿಲ್ಲ, ಅಶ್ಲೀಲ ಎನಿಸುವಂತಹ ಪಾತ್ರಗಳಲ್ಲಿ ನಾನು ಅಭಿನಯಿಸೋದಿಲ್ಲ.

- ಪ್ರೇಕ್ಷಕರು ನನ್ನನ್ನು ಇಷ್ಟು ದಿನ ಕ್ಯೂಟ್ ಹುಡುಗಿ ಪಾತ್ರದಲ್ಲಿ ನೋಡಿದ್ದೇ ಹೆಚ್ಚು. ಹಾಗಾಗಿ 'ರ‍್ಯಾಂಬೋ 2' ಚಿತ್ರದ ಮೊದಲ ಫಸ್ಟ್ ಲುಕ್ ಹೊರ ಬಂದಾಗ ಎಲ್ಲರೂ ನನ್ನನ್ನು ಕೇಳಿದ್ರು. ಇದೇನು ಇಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದೀರಿ ಅಂದಿದ್ದರು. ಅಲ್ಲಿ ಮೆಚ್ಚಿಕೊಂಡವರೇ ಹೆಚ್ಚು. ತುಂಬಾ ಜನ ಚೆನ್ನಾಗಿ ಕಾಣುತ್ತೀರಿ ಅಂತಲೂ ಹೇಳಿದ್ದರು. ಅದು ಖುಷಿ ಕೊಟ್ಟಿದೆ. ಚಿತ್ರ ತೆರೆಗೆ ಬಂದ್ಮೇಲೆ ಪ್ರೇಕ್ಷಕರಿಂದ ಅದಕ್ಕೆ ಹೇಗೆ ಪ್ರತಿಕ್ರಿಯೆ ಬರುತ್ತೆ ಅನ್ನುವ ಕಾತರ ನನಗೂ ಇದೆ.?
 

loader