ಅರುಂಧತಿ ನಾಗ್ ಈ ಬಾರಿ ನಟಿಸುತ್ತಿರುವ ಚಿತ್ರದಲ್ಲಿ ಜೋಗಿ ಪ್ರೇಮ್ ಗೆ ತಾಯಿ ಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ಧಿ ಗಾಂಧಿನಗರದಲ್ಲಿ ಸುಳಿದಾಡುತ್ತಿದೆ

ಬೆಂಗಳೂರು (ಸೆ.20): ಅರುಂಧತಿ ನಾಗ್ ಯಾರಿಗೆ ತಾನೇ ಪರಿಚಯವಿಲ್ಲ? ಕನ್ನಡ ಸಿನಿಮಾ ರಸಿಕರ ಮನ ತಟ್ಟಿದ ಶಿವರಾಜ್ ಕುಮಾರ್ ಅವರ ಜೋಗಿ ಸಿನಿಮಾದಲ್ಲಿ ತಾಯಿ ಪಾತ್ರ ಮಾಡಿ ಜನ ಮೆಚ್ಚುಗೆ ಗಳಿಸಿದ್ದ ಅರುಂಧತಿ ನಾಗ್ ಈಗ ಮತ್ತೆ ಜೋಗಿ ನಿರ್ಧೇಶಕ ಪ್ರೇಮ್ ಅವರ ಸಿನಿಮಾದಲ್ಲಿ ಮತ್ತೆ ಗಾಂಧಿನಗರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾವೇರಿ ಗಲಾಟೆಯಿಂದಾಗಿ ಸಿನಿಮಾ ಕುರಿತು ಹೆಚ್ಚು ಸುದ್ದಿಯಾಗುತ್ತಿಲ್ಲ, ಆದರೆ ಅರುಂಧತಿ ನಾಗ್ ಈ ಬಾರಿ ನಟಿಸುತ್ತಿರುವ ಚಿತ್ರದಲ್ಲಿ ಜೋಗಿ ಪ್ರೇಮ್ ಗೆ ತಾಯಿ ಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ಧಿ ಗಾಂಧಿನಗರದಲ್ಲಿ ಸುಳಿದಾಡುತ್ತಿದೆ. ಈ ಸಿನಿಮಾ ತಾಯಿ ಮಗನ ಸಂಭಂದದ ಸುತ್ತ ಹಣೆಯಲ್ಪಟ್ಟಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ. ಇನ್ನುಳಿದಂತೆ ಈ ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ಮತ್ತು ಭಾವನಾ ಕೂಡಾ ಅಭಿನಯಿಸಲಿದ್ದಾರೆ.