ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆಳತಿ ಗ್ಯಾಬ್ರಿಲ್ಲಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಾಮಕರಣ ಮಾಡಿದ್ದು ಫೋಟೋ ಶೇರ್ ಮಾಡಿದ್ದಾರೆ. 

ನಮ್ಮ ಜೀವನದಲ್ಲಿ ಕಾಮನಬಿಲ್ಲು ಮೂಡಿದೆ. ಖುಷಿ ತಂದಿದೆ. ನಮ್ಮ ಲೈಫಿಗೆ ಜೂನಿಯರ್ ರಾಂಪಾಲ್ ಗೆ ಸ್ವಾಗತ. ನಿಮ್ಮೆಲ್ಲರ ಪ್ರೀತಿ, ಹಾರೈಕೆಗೆ ಧನ್ಯವಾದಗಳು. ಆರಿಕ್ ರಾಂಪಾಲ್ ಗೊಂದು ಹಲೋ ಹೇಳಿ ಎಂದು ಬರೆದುಕೊಂಡಿದ್ದಾರೆ. 

 

ಮಗುವಿಗೆ ಆರಿಕ್ ಎಂದು ಹೆಸರಿಟ್ಟಿದ್ದಾರೆ. ಗ್ಯಾಬ್ರಿಲ್ಲಾ ಜುಲೈ 18 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. 

ಅರ್ಜುನ್ ರಾಂಪಾಲ್ ಗೆ ಈಗಾಗಲೇ ಮದುವೆಯಾಗಿದ್ದು ಮಹಿಕಾ ಹಾಗೂ ಮೈರಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  

ಅರ್ಜುನ್ ಮೆಹರ್ ಜೆಸಿಯಾ ಎಂಬುವವರನ್ನು ಮದುವೆಯಾಗಿದ್ದರು. ಮದುವೆಯಾಗಿ 20 ವರ್ಷದ ನಂತರ ಕಳೆದ ವರ್ಷ ಇಬ್ಬರೂ ಬೇರೆ ಬೇರೆಯಾಗಿದ್ದರು. ನಂತರ ಗ್ಯಾಬ್ರಿಲ್ಲಾ ಜೊತೆ ಲೀವಿಂಗ್ ರಿಲೇಶನ್ ಷಿಪ್ ನಲ್ಲಿದ್ದರು. ಇವರಿಬ್ಬರ ಸಂಬಂಧವನ್ನು ಮಕ್ಕಳು ಒಪ್ಪಿಕೊಂಡಿದ್ದಾರೆ.