ಬಾಲಿವುಡ್ ಹಿರಿಯ ನಟ ರಿಷಿ ಕಪೂರ್ ನ್ಯೂಯಾರ್ಕ್ ನಲ್ಲಿ ಕ್ಯಾನ್ಸರ್ ಟ್ರೀಟ್ ಮೆಂಟ್ ಪಡೆಯುತ್ತಿದ್ದಾರೆ. ಸಾಕಷ್ಟು ಬಾಲಿವುಡ್ ಸೆಲಬ್ರಿಟಿಗಳು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. 

ನ್ಯೂಯಾರ್ಕ್ ಗೆ ತೆರಳಿದ್ದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ರಿಷಿ ಕಪೂರನ್ನು ಭೇಟಿ ಮಾಡಿದ್ದಾರೆ. ಉಭಯ ಕುಶಲೋಪರಿ ವಿಚಾರಿಸಿದ್ದಾರೆ. 

 

 
 
 
 
 
 
 
 
 
 
 
 
 

Fun evening with our very own Ghar ka bacha Arjun n the Lovly malaika ❤️

A post shared by neetu Kapoor. Fightingfyt (@neetu54) on Jul 4, 2019 at 8:01am PDT

 

ಈ ಫೋಟೋವನ್ನು ರಿಷಿ ಕಪೂರ್ ಶೇರ್ ಮಾಡಿದ್ದು, ‘ ನನ್ನನ್ನು ನೋಡಲು ಬಂದಿದ್ದಕ್ಕೆ ಮಲೈಕಾ ಹಾಗೂ ಅರ್ಜುನ್ ಥ್ಯಾಂಕ್ಸ್ ಎಂದು ಹೇಳಿದ್ದಾರೆ. 

ಅರ್ಜುನ್ ಕಪೂರ್ , ರಿಷಿ ಕಪೂರ್ ಹಾಗೂ ನೀತೂಗೆ ಥ್ಯಾಂಕ್ಸ್ ಹೇಳಿದ್ದಾರೆ.  ನಮ್ಮ ಮನೆ ರೀತಿ ನಮಗೆ ಆತೀಥ್ಯ ನೀಡಿದ್ದಕ್ಕೆ ಥ್ಯಾಂಕ್ಸ್. ನೀವು ಕ್ಯಾನ್ಸರ್ ವಿರುದ್ಧ ಹೋರಾಡುವ ರೀತಿ ಇನ್ಸ್ಪೈರ್ ಆಗುವಂತಿದೆ. ನೀವು ಶೀಘ್ರದಲ್ಲೇ ಮುಂಬೈಗೆ ಹಿಂತಿರುಗುವುದನ್ನು ನೋಡಲು ಇಷ್ಟಪಡುತ್ತೇವೆ. ಆದಷ್ಟು ಬೇಗ ಬನ್ನಿ ಎಂದು ಹಾರೈಸಿದ್ದಾರೆ. 

 
 
 
 
 
 
 
 
 
 
 
 
 

Thank u @neetu54 n Rishi uncle for such a warm n lovely evening 🤗♥️😘#Nyc

A post shared by Malaika Arora (@malaikaaroraofficial) on Jul 4, 2019 at 8:25am PDT

ಅರ್ಜುನ್ ಕಪೂರ್ 34 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಬರ್ತಡೇಗಾಗಿ ನ್ಯೂಯಾರ್ಕ್ ಗೆ ತೆರಳಿದ್ದರು. ಅಲ್ಲಿ ಒಂದಷ್ಟು ಕ್ವಾಲಿಟೇಟಿವ್ ಸಮಯ ಕಳೆದಿದ್ದಾರೆ. ಮಲೈಕಾ ಜೊತೆಗಿನ ಫೋಟೋವನ್ನು ಶೇರ್ ಮಾಡಿಕೊಂಡು, ನನ್ನ ಹೃದಯ ಅವಳ ಬಳಿಯಿದೆ ಎಂದು ಸ್ಟೇಟಸ್ ಹಾಕಿದ್ದರು.