ಸ್ಮಾಲ್ ಸ್ಕ್ರೀನ್ ನಟ-ನಟಿಯರನ್ನು ಮನೆ ಮಕ್ಕಳಂತೆ ಕಾಣೋದೆ ಹೆಚ್ಚು. ನಿತ್ಯ ಟಿವಿ ಪರದೆ ಮೇಲೆ ಕಾಣುವ ಅವರ ನಟನೆಯೇ ಅದಕ್ಕೆ ಕಾರಣ. ಅದರಲ್ಲೂ ಮನೆದೇವ್ರು ಹಾಗು ಮಧುಬಾಲ ಖ್ಯಾತಿಯ ಅರ್ಚನ ಲಕ್ಷ್ಮಿನರಸಿಂಹಸ್ವಾಮಿ ಮುಗ್ದ, ಸ್ನಿಗ್ದ ಚೆಲುವಿನಿಂದ ಮನಸೆಳೆದವರು.

ಜೂನ್.22 ರಂದು ತನ್ನ ಕುಟುಂಬದ ಒಡಗೂಡಿ ಸಿಂಪಲ್ ಆಗಿ ಎಂಗೇಜ್‌ಮೆಂಟ್ ಮಾಡಿಕೊಂಡು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಎಲ್ಲಾ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು.

ಅದರಲ್ಲೂ ಒಂದು ಫೋಟೋಗೆ ಸ್ಟೇಟಸ್ ನಲ್ಲಿ " ಯಾರು ಹೇಳಿದ್ದು ನಿಜ ಜೀವನದಲ್ಲಿ ಫೇರಿ ಟೇಲ್ ಇಲ್ಲವೆಂದು? ನಿಮ್ಮ ಜೀವನದ ಕನಸಿನ ರಾಜ ಸಿಕ್ಕರೆ ನಿಮ್ಮದೆ ಫೇರಿ ಟೇಲ್.ಇಲ್ಲಿದ ಮೈ ಮ್ಯಾನ್ And ಮೈ ಫೇರಿ ಟೇಲ್" ಎಂದು ಹಾಕಿ ಪರ್ಪಲ್ ಕಲರ್ ಉಡುಪಿನಲ್ಲಿ ಮಿಂಚಿದ್ರು.

ಅಷ್ಟೇ ಅಲ್ಲದೆ ಕುತ್ತಿಗೆ ಭಾಗದಲ್ಲಿ 'VG' ಎಂದು ಟ್ಯಾಟು ಹಾಕಿಸಿಕೊಂಡಿದ್ದಾರೆ. ಅದನ್ನು ಮೂರು ರೀತಿಯಲ್ಲಿ ವಿವರಿಸಿದ್ದಾರೆ.

View post on Instagram

ಸದ್ಯ ಅರ್ಚನಾ ವಿವಾಹವೂ ಕೂಡ ನಡೆದಿದೆ. ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಮದುವೆ ನಡೆದಿದ್ದು, ಮೊದಲನೆ ದಿನ ಹಳದಿ ಬಣ್ಣದ ಹಾಗು ಹೂಗಳ ಟೈಯಾರ ಮಾಡಿಕೊಂಡು ಮೇಹೆಂದಿ ಕಾರ್ಯಕ್ರಮ ನಡೆಸಲಾಗಿದೆ. ನಂತರ ವರ ಪೂಜೆ, ಆರತಕ್ಷತೆ ನಂತರ ದಾರೆ ಮುಹೂರ್ತ ನೆರವೇರಿದೆ. ತಮ್ಮ ದಾಂಪತ್ಯ ಜೀವನದ ಎಲ್ಲಾ ಎಲ್ಲಾ ಫೋಟೋವನ್ನು ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಅರ್ಚನಾ ಶೇರ್ ಮಾಡಿಕೊಂಡಿದ್ದಾರೆ.

View post on Instagram