ಸಿನಿಮಾ ಜೀವನದಲ್ಲಿ ಬ್ಯುಸಿಯಾಗಿರುವ ಅನುಷ್ಕಾ ಶೆಟ್ಟಿಗೆ ಈಗ 35 ವರ್ಷ. ಹೀಗಾಗಿ ಆದಷ್ಟು ಬೇಗ ಮದುವೆ ಮಾಡಿಸಬೇಕು ಎಂಬುದು ಆಕೆಯ ಹೆತ್ತವರ ಯೋಚನೆ. ಪೋಷಕರ ಒತ್ತಡಕ್ಕೆ ಮಣಿದು ಮದುವೆ ಆಗುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರುವ ಅನುಷ್ಕಾಗೆ ಬೆಂಗಳೂರಿನ ಬಿಸಿನೆಸ್ ಮ್ಯಾನ್ ಜತೆ ವಿವಾಹ ಮಾಡಿಸುವ ಯೋಚನೆಯಲ್ಲಿದ್ದಾರೆ. ಆದರೆ, ಅನುಷ್ಕಾ ಕೈ ಹಿಡಿಯಲಿರುವ ಆ ಉದ್ಯಮಿ ಯಾರೆಂಬುದು ಸದ್ಯಕ್ಕೆ ಬಹಿರಂಗಗೊಂಡಿಲ್ಲ. ಬೆಂಗಳೂರು ಹಾಗೂ ಆಂಧ್ರಪ್ರದೇಶದಲ್ಲಿ ಇವರ ಒಡೆತನದಲ್ಲಿ ಸಾಕಷ್ಟು ಉದ್ಯಮಗಳು ಇವೆ ಎನ್ನಲಾಗುತ್ತಿದೆ. ಸದ್ಯಕ್ಕೆ ಅನುಷ್ಕಾ ಬೆಂಗಳೂರು ಉದ್ಯಮಿಯನ್ನು ಕೈ ಹಿಡಿಯುವುದಕ್ಕೆ ಒಪ್ಪಿಕೊಂಡಿದ್ದು, ಒಂದು ಮೂಲದ ಪ್ರಕಾರ 2017ಕ್ಕೆ ಅನುಷ್ಕಾ ಶೆಟ್ಟಿ ಮದುವೆ ಆಗುವುದು ಖಚಿತವಂತೆ. ಹಾಗಾದರೆ ಈ ಮದುವೆ ವಿಷಯ ಖರೇನಾ? ಎಂಬುದು ಅನುಷ್ಕಾ ಮದುವೆಯಾದ ಮೇಲೆಯೇ ಗೊತ್ತಾಗಲಿದೆ.
ಬೆಂಗಳೂರು(ಡಿ.03): ದಕ್ಷಿಣ ಭಾರತದ ಬಹು ಬೇಡಿಕೆಯ ನಟಿ ಎನಿಸಿಕೊಂಡಿರುವ ಅನುಷ್ಕಾ ಶೆಟ್ಟಿಯ ಮದುವೆ ವಿಚಾರ ಆಗಾಗ ಸದ್ದು ಮಾಡುತ್ತಲೇ ಇರುತ್ತದೆ. ಅನುಷ್ಕಾ ಪ್ರೇಮ ಕಹಾನಿಗಳಿಂದ ಶುರುವಾಗಿ ಇನ್ನೇನು ಮದುವೆ ಆಗೇ ಬಿಟ್ಟರು ಎನ್ನುವವರೆಗೂ ಸಾಕಷ್ಟು ಸುದ್ದಿ ಆಗಿದೆ. ಈಗ ಮತ್ತೊಂದು ಸುದ್ದಿ ತೇಲಿ ಬಂದಿದೆ. ಈ ಬಾರಿಗೆ ಅನುಷ್ಕಾ ಮದುವೆಯಾಗಲಿರುವುದು ಬೆಂಗಳೂರು ಮೂಲದ ಉದ್ಯಮಿ ಎನ್ನುವ ಮಾತುಗಳಿವೆ.
CLICK HERE..ಜಿಯೋ ಬಳಕೆದಾರರಿಗೆ ಬಂಪರ್