ಕನ್ನಡ ನಟಿಯರೇ ಕನ್ನಡ ಮಾತನಾಡುವುದಿಲ್ಲ ಎಂಬ ಆರೋಪ ಇತ್ತೀಚಿಗೆ ಹೆಚ್ಚಾಗಿ ಕೇಳಿ ಬರುತ್ತಿದೆ. ಇತ್ತೀಚಿಗೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಕಷ್ಟ ಎಂದಿದ್ದು ಸುದ್ದಿಯಾಗಿದ್ದು ಗೊತ್ತೇ ಇದೆ. ಹೀಗಿರುವಾಗ ಬಾಲಿವುಡ್ ನಟಿಯೊಬ್ಬರು ಕನ್ನಡ ಮಾತನಾಡಿದರೆ ಹೇಗೆ ಅನಿಸುತ್ತದೆ ಅಲ್ವಾ? 

ಹೌದು, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕನ್ನಡದಲ್ಲಿ ಮಾತನಾಡಿದ್ದಾರೆ. ಅನುಷ್ಕಾ ಶರ್ಮಾ ಕನ್ನಡದಲ್ಲಿ ಮಾತಾಡೋದಾ ಅಂತ ಅಚ್ಚರಿಪಡಬೇಡಿ. ಅನುಷ್ಕಾ ಕನ್ನಡದಲ್ಲಿಯೇ ಮಾತನಾಡಿದ್ದಾರೆ. 

ಅನುಷ್ಕಾ ಬರೀ ನಟಿಯಾಗಿದ್ದರೆ ಅವರು ಅಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಅವರು ಸಾಮಾಜಿಕ ಕಾರ್ಯಗಳಿಂದಲೂ ಫೇಮಸ್. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಅದೇ ರೀತಿ ಸೋಷಿಯಲ್ ಮೀಡಿಯಾದಲ್ಲಿ ಪಾಸಿಟೀವ್ ನೆಸ್ ನನ್ನು ಹೆಚ್ಚಿಸಲು ‘ಲವ್ ಆ್ಯಂಡ್ ಲೈಟ್’ ಎನ್ನುವ ಪ್ರಾಜೆಕ್ಟ್ ವೊಂದನ್ನು ಶುರು ಮಾಡಿದ್ದಾರೆ. ಇದರ ಮೂಲ ಉದ್ದೇಶವೇ ಪಾಸಿಟೀವ್ ನೆಸ್ ನನ್ನು ಹೆಚ್ಚಿಸುವುದು. 

ಸೋಷಿಯಲ್ ಮೀಡಿಯಾದಲ್ಲಿ ಜನರು ಮಾಡಿರುವ ಪಾಸಿಟೀವ್ ಕಮೆಂಟ್ ಗಳನ್ನೆಲ್ಲಾ ಸೇರಿಸಿ ವಿಡಿಯೋ ಮಾಡಿದ್ದಾರೆ. ಅದರಲ್ಲಿ ಕಮೆಂಟ್ ಗಳನ್ನು ಓದುತ್ತಾ ಕೊನೆಗೆ ‘ಅಷ್ಟೇ’ ಎನ್ನುತ್ತಾರೆ. ಅನುಷ್ಕಾ ಕನ್ನಡ ಪದ ಬಳಸಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.