ಅನುಷ್ಕಾರ ಮುಂಬರುವ ಚಿತ್ರ ಫಿಲೌರಿ ಚಿತ್ರದ ಸಂದರ್ಶನವೊಂದರಲ್ಲಿ ಒಂದು ಮಜವಾದ ಘಟನೆ ನಡೆದಿದೆ. ಸಂದರ್ಶನದ ಮಧ್ಯದಲ್ಲಿ ಅಲ್ಲಿದ್ದ ವರದಿಗಾರ್ತಿಯ ಅಮ್ಮ ಫೋನ್ ಮಾಡಿದ್ದಾರೆ. ಅನುಷ್ಕಾ ಫೋನ್ ಎತ್ತಿ ಕೂಲಾಗಿ ಅಮ್ಮನಿಗೆ ಉತ್ತರಿಸಿದ್ದಾರೆ.
ಮುಂಬೈ (ಮಾ.09): ಅನುಷ್ಕಾ ಶರ್ಮಾ ಯಾವಾಗಲೂ ಕೂಲ್ ಆಗಿರ್ತಾರೆ. ಅವರ ಫನ್ನಿ ಫನ್ನಿ ಅನ್ನಿಸುವಂತ ವರ್ತನೆ ಎಲ್ಲರಿಗೂ ಇಷ್ಟವಾಗುತ್ತೆ.
ಅನುಷ್ಕಾರ ಮುಂಬರುವ ಚಿತ್ರ ಫಿಲೌರಿ ಚಿತ್ರದ ಸಂದರ್ಶನವೊಂದರಲ್ಲಿ ಒಂದು ಮಜವಾದ ಘಟನೆ ನಡೆದಿದೆ. ಸಂದರ್ಶನದ ಮಧ್ಯದಲ್ಲಿ ಅಲ್ಲಿದ್ದ ವರದಿಗಾರ್ತಿಯ ಅಮ್ಮ ಫೋನ್ ಮಾಡಿದ್ದಾರೆ. ಅನುಷ್ಕಾ ಫೋನ್ ಎತ್ತಿ ಕೂಲಾಗಿ ಅಮ್ಮನಿಗೆ ಉತ್ತರಿಸಿದ್ದಾರೆ.
ಹಾಯ್ ಆಂಟಿ, ನಿಮ್ಮ ಮಗಳೀಗ ನನ್ನ ಇಂಟರವ್ಯೂ ತಗೋಳ್ತಾ ಇದಾಳೆ. ಬಳಿಕ ಕಾಲ್ ಮಾಡ್ತಾಳೆ... ನಾನು ಅನುಷ್ಕಾ ಶರ್ಮಾ ಮಾತಾಡ್ತಾ ಇದೀನಿ ಅಂತ ಮನೆ ಮಗಳಂತೆ ಮಾತಾಡಿದ್ದಾರೆ. ಇನ್ನೂ ಮಜಾ ಅಂದರೆ ಅಲ್ಲಿ ವರದಿಗಾರ್ತಿಯೊಬ್ಬರೇ ಇಲ್ಲ. ಇಡೀ ಮಾಧ್ಯಮದ ಮಂದಿಯೇ ಹಾಜರಿದ್ದರು!
ಅಂದಹಾಗೆ ಅನುಷ್ಕಾ ಶರ್ಮಾ ನಿರ್ಮಾಣದ ಅನ್ಶಯ್ ಲಾಲ್ ನಿರ್ದೇಶನದಲ್ಲಿ ಫಿಲೌರಿ ಚಿತ್ರ ತೆರೆ ಕಾಣುತ್ತಿದೆ. ದಿಲ್ಜಿತ್ ದೋಸಂಜ್ ಮತ್ತು ಸೂರಜ್ ಶರ್ಮಾ ಮುಖ್ಯ ಭೂಮಿಕೆಯಲ್ಲಿದ್ದಾರೆ.