ವಕೀಲರ ಬಗ್ಗೆ ವಿವಾದಿತ ಸಂಭಾಷಣೆಯಿರುವ ಕಾರಣದಿಂದ ನಾರಾಯಣಸ್ವಾಮಿ ಹಾಗೂ ಮತ್ತವರ ತಂಡ ಕೋರ್ಟ್ ದಾವೆ ಹೂಡಿ ಜನವರಿ 2ರವರೆಗೂ ಚಿತ್ರ ಪ್ರದರ್ಶನಕ್ಕೆ ತಡೆ ನೀಡಿದ್ದರು.

ಬೆಂಗಳೂರು(ಡಿ.29): ಕಳೆದ ನಾಲ್ಕೈದು ದಿನಗಳಿಂದ ಕೋರ್ಟ್'ನಿಂದ ತಡೆ ಅನುಭವಿಸಿದ್ದ ಅಂಜನಿಪುತ್ರ ಸಿನಿಮಾಗೆ ಕೊನೆಗೂ ರಿಲೀಫ್ ಸಿಕ್ಕಿದೆ.

ಚಿತ್ರತಂಡ ಕೂಡ ಸಾರ್ವಜನಿಕವಾಗಿ ಕ್ಷಮಾಪಣೆ ಕೋರಿದ ಕಾರಣ ಅರ್ಜಿದಾರರು 34 ನೇ ಸಿವಿಲ್ ನ್ಯಾಯಾಲಯದಲ್ಲಿ ಪ್ರದರ್ಶನ ನಿಷೇಧಕ್ಕೆ ಅರ್ಜಿ ಹಿಂಪಡೆಯುವಾದಾಗಿ ಮೆಮೊ ಸಲ್ಲಿಸಿದ ಕಾರಣ ವಿವಾದ ಅಂತ್ಯಗೊಂಡಿದೆ. ಚಿತ್ರತಂಡಕ್ಕೆ 25 ಸಾವಿರ ದಂಡ ವಿಧಿಸಿದ್ದು, ದಂಡದ ಹಣವನ್ನು ವಕೀಲರ ಕಲ್ಯಾಣ ನಿಧಿಗೆ ಪಾವತಿಸುವಂತೆ ಆದೇಶಿಸಿದೆ.

ವಕೀಲರ ಬಗ್ಗೆ ವಿವಾದಿತ ಸಂಭಾಷಣೆಯಿರುವ ಕಾರಣದಿಂದ ನಾರಾಯಣಸ್ವಾಮಿ ಹಾಗೂ ಮತ್ತವರ ತಂಡ ಕೋರ್ಟ್ ದಾವೆ ಹೂಡಿ ಜನವರಿ 2ರವರೆಗೂ ಚಿತ್ರ ಪ್ರದರ್ಶನಕ್ಕೆ ತಡೆ ನೀಡಿದ್ದರು. ಕೋರ್ಟ್'ನಲ್ಲಿ ಪುನಃ ಅರ್ಜಿ ಸಲ್ಲಿಸಿದ ವಕೀಲ ನಾರಾಯಣ ಮತ್ತವರ ತಂಡ ಪೊಲೀಸ್ ಇಲಾಖೆಗೆ ಆದೇಶಿಸುವಂತೆ ಮತ್ತೊಂದು ತಡೆಯಾಜ್ಞೆ ತಂದಿದ್ದರು.

ನ್ಯಾಯಾಲಯದಿಂದ ತಡೆಯಿದ್ದು ಪ್ರದರ್ಶನ ಮುಂದುವರಿದ ಕಾರಣ ನ್ಯಾಯಾಂಗ ನಿಂದನೆ ಅನುಭವಿಸುವ ಪರಿಸ್ಥಿತಿ ಚಿತ್ರತಂಡಕ್ಕೆ ಎದುರಾಗಿತ್ತು. ಡಿಜಿಪಿ ಕೂಡ ರಾಜ್ಯದ ಎಲ್ಲ ಜಿಲ್ಲಾ ಎಸ್'ಪಿ'ಗಳಿಗೆ ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಆದೇಶ ನೀಡಿದ್ದರು. ವಿವಾದ ಅಂತ್ಯಗೊಂಡ ಕಾರಣ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡಲು ಡಿಜಿಐಜಿಗೆ ಕೋರ್ಟ್ ನಿರ್ದೇಶಿಸಿದೆ.