'ಉಗ್ರಂ' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರವನ್ನು ನಿರ್ದೇಶಿಸಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಿರಿಯ ನಟ ಅನಂತ್ ನಾಗ್ ಕೆ.ಜಿ.ಎಫ್ ಟೀಸರ್'ನಲ್ಲಿ ಯಶ್ ಪಾತ್ರವನ್ನು ಪರಿಚಯಿಸಿದ್ದಾರೆ.
ಸ್ಯಾಂಡಲ್'ವುಡ್'ನ ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ಕೆ.ಜಿ.ಎಫ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದೀಗ ಯೂಟೂಬ್'ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.
ಇಂದು ಯಶ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಒಂದು ದಿನ ಮುಂಚಿತವಾಗಿಯೇ ಹೊಂಬಾಳೆ ಫಿಲ್ಟ್ಸ್ ಟೀಸರ್ ಬಿಡುಗಡೆ ಮಾಡಿದ್ದು, ಒಂದು ದಿನ ಪೂರ್ತಿಯಾಗುವುದರೊಳಗಾಗಿ 4 ಲಕ್ಷಕ್ಕೂ ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದಾರೆ.
'ಉಗ್ರಂ' ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರವನ್ನು ನಿರ್ದೇಶಿಸಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಹಿರಿಯ ನಟ ಅನಂತ್ ನಾಗ್ ಕೆ.ಜಿ.ಎಫ್ ಟೀಸರ್'ನಲ್ಲಿ ಯಶ್ ಪಾತ್ರವನ್ನು ಪರಿಚಯಿಸಿದ್ದಾರೆ.

ಕೆ.ಜಿ.ಎಫ್. ಚಿತ್ರತಂಡ ಯಶ್ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳಿಗಾಗಿ ಟೀಸರ್ ಬಿಡುಗಡೆ ಮಾಡಿದೆ.