ಬಾಲಿವುಡ್ ಬಿಗ್ ಬಿ ಅಮಿತಾಬಚ್ಚನ್ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದೆ. ಹ್ಯಾಕರ್ ಗಳು ಅಮಿತಾಬ್ ಪ್ರೊಫೈಲ್ ಫೋಟೋಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಹಾಕಿ 'ಲವ್ ಪಾಕಿಸ್ತಾನ' ಎಂದು ಬರೆದಿದ್ದಾರೆ. 

ಸುಮಲತಾರನ್ನು ಮದುವೆ ಆಗ್ತೀನಿ ಎಂದ ನಟನಿಗೆ ರೇಗಿಸಿದ ಅಂಬಿ ?

ಕವರ್ ಫೋಟೋವನ್ನು ಬದಲಾಯಿಸಿದ್ದಾರೆ. ಫೋಸ್ಟ್ ಗಳನ್ನೂ ಮಾಡಿದ್ದಾರೆ. 

" ನಾವು ಈ ವಿಚಾರವನ್ನು ಸೈಬರ್ ಪೋಲಿಸರ ಗಮನಕ್ಕೆ ತಂದಿದ್ದೇವೆ. ಅವರು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಪ್ರೇಯಸಿಗಾಗಿ ಬಾಲಿವುಡ್ ಡ್ರೀಮ್‌ಗರ್ಲನ್ನೇ ತಿರಸ್ಕರಿಸಿದ ಕಾರ್ನಾಡರು!

ಇದೇ ಹ್ಯಾಕಿಂಗ್ ಗ್ರೂಪ್ ಈ ಹಿಂದೆ ಶಾಹಿದ್ ಕಪೂರ್ ಹಾಗೂ ಅನುಪಮ್ ಖೇರ್ ಅಕೌಂಟನ್ನೂ ಹ್ಯಾಕ್ ಮಾಡಿತ್ತು.