Asianet Suvarna News Asianet Suvarna News

ಭಾವನಾಗೆ ವರ್ಷದ ಅತ್ಯುತ್ತಮ ಭಾರತೀಯ ನಟಿ ಪ್ರಶಸ್ತಿ

ಮೇರಿಲ್ಯಾಂಡ್ ಮತ್ತ ವಾಷಿಂಗ್ಟನ್ ಡಿಸಿಯ ಕಾವೇರಿ ಕನ್ನಡ ಅಸೋಸಿಯೇಷನ್ ನಟಿ ಭಾವನಾ ಅವರಿಗೆ ವರ್ಷದ ಅತ್ಯುತ್ತಮ ಭಾರತೀಯ ನಟಿ ಪ್ರಶಸ್ತಿ ನೀಡಿದೆ.

America honers Sandalwood actress Bhavana as 'Best Indian Actress'
Author
Bengaluru, First Published Oct 13, 2018, 10:20 AM IST
  • Facebook
  • Twitter
  • Whatsapp

ಅಮೆರಿಕ ಸಂಯುಕ್ತ ಸಂಸ್ಥಾನದ ಮೇರಿಲ್ಯಾಂಡ್‌ನ ’ಬಿಗ್ ಬಿಸಿನೆಸ್ ವಿತ್ ಸ್ಮಾಲ್ ಬಿಸಿನೆಸ್’ ಕಾರ್ಯಕ್ರಮಕ್ಕೆ ಭಾವನಾ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅಲ್ಲಿ, ಭಾವನಾರಿಗೆ ಕನ್ನಡ ಚಲನಚಿತ್ರೋದ್ಯಮಕ್ಕೆ ನೀಡಿದ ಕೊಡುಗೆಗಳಿಗಾಗಿ ಅಮೆರಿಕ ಸಂಯುಕ್ತ ಸಂಸ್ಥಾನದ ಮೇರಿಲ್ಯಾಂಡ್ ರಾಜ್ಯದ ಗವರ್ನರ್ ಅವರ ಪ್ರತಿಷ್ಠಿತ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಹೂವು ಪ್ರತಿಷ್ಠಾನದ ಮೂಲಕ ಭಾರತದ ವಿವಿಧ ಭಾಗಗಳಲ್ಲಿ ಕಲಾವಿದರನ್ನು ಹಾಗೂ ವಿವಿಧ ಕಲಾಪ್ರಕಾರಗಳನ್ನು ಪ್ರೋತ್ಸಾಹಿಸಿ ಹುರಿದುಂಬಿಸುತ್ತಿರುವುದಕ್ಕಾಗಿ ಕೂಡ ರಾಜ್ಯಪಾಲರು ಅವರನ್ನು ಪ್ರಶಂಸಿಸಿದರು.

ಸುಧಾಕರ್ ಗಂದೆ ಅವರ ಲೆಕ್ಸಿಕನ್ ಮೋಶನ್ ಪಿಕ್ಚರ್ಸ್ ಜೊತೆ ಹೋಂಟೌನ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕಳೆದ ವರ್ಷ ನಿರುತ್ತರ ಚಲನಚಿತ್ರವನ್ನು ಅವರು ನಿರ್ಮಿಸಿದ್ದರು. ಈ ಚಿತ್ರದಲ್ಲಿ ಆಸ್ಕರ್ ವಿಜೇತ ರೆಸೂಲ್ ಪೂಕುಟ್ಟಿ ಕನ್ನಡ ಚಲನಚಿತ್ರವೊಂದಕ್ಕಾಗಿ ಪ್ರಪ್ರಥಮ ಬಾರಿ ಕೆಲಸ ಮಾಡಿದ್ದರು.

America honers Sandalwood actress Bhavana as 'Best Indian Actress'

Follow Us:
Download App:
  • android
  • ios