ಒಂದು ಕಡೆ ರಣಬೀರ್ ಕಪೂರ್ ಅಭಿನಯದ ‘ಸಂಜು’ ಚಿತ್ರ ಸೂಪರ್ ಫಾಸ್ಟ್ ಆಗಿ ಮುಂದೆ ಸಾಗುತ್ತಿದೆ. ಅದರ ಜೊತೆ ಜೊತೆಯಲ್ಲೇ ‘ಫಿಫಾ’ ವರ್ಲ್ಡ್ ಕಪ್ ಫುಟ್‌ಬಾಲ್ ಫೀವರ್ ಜಗತ್ತಿನಾದ್ಯಂತ ಜೋರಾಗಿಯೇ ಇದೆ. ಇವೆರಡರ ನಡುವೆ ಈಗ ಆಲಿಯಾ ಭಟ್‌ಗೆ ಫುಟ್‌ಬಾಲ್ ಮೇಲೆ ಭಯಂಕರ ಆಸಕ್ತಿ ಉಂಟಾಗಿದೆ. ಅದಕ್ಕೆ ಕಾರಣ ರಣಬೀರ್ ಕಪೂರ್.

ಆಲಿಯಾ ಮತ್ತು ರಣಬೀರ್ ನಡುವಿನ ಕೆಮಿಸ್ಟ್ರಿ ಇಂದು ನಿನ್ನೆಯದ್ದಲ್ಲ. ಆಗಾಗ ಒಟ್ಟಿಗೆ ಔಟಿಂಗ್, ಡೇಟಿಂಗ್ ಅಂತೆಲ್ಲಾ ಇವರು ಸುತ್ತಾಡಿದ್ದು, ಸುತ್ತಾಡುತ್ತಿರುವುದು ಸಾಕಷ್ಟು ಸುದ್ದಿಯೂ ಆಗಿದೆ. ಈಗ ಆಲಿಯಾ ರಣಬೀರ್‌ಗಾಗಿಯೇ ಫುಟ್‌ಬಾಲ್ ಆಟದ ಮೇಲೆ ಇಂಟರೆಸ್ಟ್ ಬೆಳೆಸಿಕೊಳ್ಳುತ್ತಿದ್ದಾರೆ. ಹೀಗಂತ ಸ್ವತಃ ರಣಬೀರ್ ಆಪ್ತ ಸ್ನೇಹಿತ ವಲಯ ಹೇಳಿದೆ. ಇಷ್ಟಕ್ಕೂ ಆಲಿಯಾ ಒಬ್ಬರಿಗೆ ಅಲ್ಲ ರಣಬೀರ್ ಸ್ನೇಹಿತ ಅಯನ್
ಮುಖರ್ಜಿಗೆ ಕೂಡ ಆಟದ ಮೇಲೆ ಆಸಕ್ತಿ ಬೆಳೆದಿದೆ.

ಇದೆಲ್ಲಕ್ಕೂ ಕಾರಣ ರಣಬೀರ್ ಜೊತೆಗೆ ಫುಟ್‌ಬಾಲ್ ಮ್ಯಾಚ್ ನೋಡುವ ಚಾನ್ಸ್ ಮಿಸ್ ಮಾಡಿಕೊಳ್ಳಬಾರದು ಎಂದು. ರಣಬೀರ್‌ಗೆ ಫುಟ್‌ಬಾಲ್ ಆಟದ ಬಗ್ಗೆ ಕ್ರೇಜ್ ಇದೆ. ಅವರು ವರ್ಲ್ಡ್ ಕಪ್ ಮ್ಯಾಚ್ ನೋಡಲು ಹೋಗುತ್ತಾರೆ. ಆಗ ಅವರೊಂದಿಗೆ ತಾವೂ ಹೋಗಬೇಕು, ಮ್ಯಾಚ್ ನೋಡಬೇಕು ಎನ್ನುವುದೇ ಈ ಅಪಾರ  ಆಸಕ್ತಿಯ ಮೂಲ.