ಮುಂಬೈ(ಅ.19): ಐಶ್ವರ್ಯ ರೈ ವಿಶ್ವ ಸುಂದರಿ ಕಿರೀಟ ಅಲಂಕರಿಸಿದವರು ಆದರೆ ಇವರ ಸೌಂದರ್ಯ ರಹಸ್ಯದ ಹಿಂದೆ ಇರುವುದು  60 ಪ್ಲಸ್‌'ನಲ್ಲೂ ಎವರ್‌ಗ್ರೀನ್ ಆಗಿರುವ ಬಾಲಿವುಡ್ ನಟಿ ರೇಖಾ ಅಂತೆ.

ಐಶ್ ಸೌಂದರ್ಯಕ್ಕೂ ರೇಖಾಗೂ ಏನ್ ಸಂಬಂಧ ಅಂತೀರಾ? ಮೊನ್ನೆ ಮುಂಬೈನಲ್ಲಿ ಫಿಲ್ಮ್‌ ಫೇರ್ ಆವಾರ್ಡ್‌ ಫಂಕ್ಷನ್ ನಡೆಯಿತು. ಐಶ್‌, ರೇಖಾ ಸೇರಿದಂತೆ ಬಹಳ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರೇಖಾ ಅವರು ಐಶ್ವರ್ಯ ರೈ ಸೌಂದರ್ಯದ ರಹಸ್ಯ ಬಿಚ್ಚಿಟ್ಟರು.

ಐಶ್ವರ್ಯ ರೈ ತಾಯಿ ಬೃಂದಾ ರೈ ಗರ್ಭಿಣಿ ಆಗಿದ್ದಾಗ ರೇಖಾರ ಫೋಟೋಗಳನ್ನೇ ಹೆಚ್ಚು ನೋಡುತ್ತಿದ್ದರಂತೆ. ಹೀಗಾಗಿ ನಾನು ಕೂಡ ನಿಮ್ಮಷ್ಟು ಸೌಂದರ್ಯವತಿ ಆದೆ ಅಂದಿದ್ದಾರೆ ಐಶ್ವರ್ಯ ರೈ.