ಮಿ ಟೂ ಅಭಿಯಾನದ ಬಗ್ಗೆ ಮನಬಿಚ್ಚಿ ಮಾತನಾಡಿದ ಐಶ್

First Published 27, Mar 2018, 12:24 PM IST
Aishwarya Rai Bachchan opens up on sexual harassment lauds MeToo movement
Highlights

ಇದೀಗ ವಿಶ್ವದ ಸುಂದರ ಮಹಿಳೆ ಎನಿಸಿಕೊಂಡ ಐಶ್ವರ್ಯಾ ರೈ  ಮಿ ಟೂ ಅಭಿಯಾನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮುಂಬೈ : ಲೈಂಗಿಕ ದೌರ್ಜನ್ಯದ ವಿರುದ್ಧ ಮಿ ಟೂ ಎಂಬ ಅಭಿಯಾನವೊಂದು ಕಳೆದ ವರ್ಷದಿಂದ ಆರಂಭವಾಗಿ ಚಿತ್ರ ಜಗತ್ತನಲ್ಲೇ ಸಾಕಷ್ಟು ಅಲ್ಲೋಲ ಕಲ್ಲೋಲ ಉಂಟು ಮಾಡಿತ್ತು. ಈ ವೇದಿಕೆಯಲ್ಲಿ ಅನೇಕ ನಟಿಯರು ತಮಗೆ ಚಿತ್ರರಂಗದಲ್ಲಿ ಎದುರಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು.

ಅನೇಕ ನಟಿಯರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು. ಹಾಲಿವುಡ್ ಪ್ರಸಿದ್ಧ ನಿರ್ಮಾಪಕ ಹಾರ್ವೆ ವಿನ್ಸ್’ಸ್ಟೈನ್’ನಿಂದ ತಾವು ಕಿರುಕುಳ ಎದುರಿಸಿದ್ದಾಗಿ ಅನೇಕ ನಟಿಯರು ಹೇಳಿಕೊಂಡಿದ್ದರು.

ಇದೀಗ ವಿಶ್ವದ ಸುಂದರ ಮಹಿಳೆ ಎನಿಸಿಕೊಂಡ ಐಶ್ವರ್ಯಾ ರೈ  ಈ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.  ಯಾವುದೇ ಮಹಿಳೆಗೆ ಇಂತಹ ಅನುಭವಗಳಾದಾಗ ಅದನ್ನು ಹೆಳಿಕೊಳ್ಳಲು ಸಾಕಷ್ಟು ಮುಜುಗರ ಅನುಭವಿಸಬೇಕಾಗುತ್ತದೆ.

ಆದರೆ ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಳ್ಳಲು ಇದೊಂದು ಒಳ್ಳೆಯ ವೇದಿಕೆಯಾಗಿದೆ.   ಇದರಲ್ಲಿ ಯಾವುದೇ ರೀತಿಯಾದ ನಿರ್ಬಂಧಗಳು ಇಲ್ಲ.  ಜೀವನದ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಮುಕ್ತ ವೇದಿಕೆ ಎಂದು ಐಶ್ವರ್ಯ ಹೇಳಿದ್ದಾರೆ.

loader