ಸೀತೆಯಾಗಿ ತೆರೆ ಮೇಲೆ ಬರಲಿದ್ದಾರೆ ಐಂದ್ರಿತಾ ರೈ

Aindrita Ray plays Sita in her second Hindi film
Highlights

ಸ್ಯಾಂಡಲ್’ವುಡ್ ಬೆಡಗಿ ಐಂದ್ರಿತಾ ರೈ ಬಾಲಿವುಡ್’ಗೆ ಹಾರಿದ್ದು ದೊಡ್ಡ ವಿಚಾರವೇನಲ್ಲ. ಎಲ್ಲಾ ರೀತಿಯ ಪಾತ್ರಗಳಲ್ಲೂ ಪಳಗಿದ ಐಂದ್ರಿತಾ ಇದೀಗ ಸೀತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 

ಬೆಂಗಳೂರು (ಜೂ. 02): ಸ್ಯಾಂಡಲ್’ವುಡ್ ಬೆಡಗಿ ಐಂದ್ರಿತಾ ರೈ ಬಾಲಿವುಡ್’ಗೆ ಹಾರಿದ್ದು ದೊಡ್ಡ ವಿಚಾರವೇನಲ್ಲ. ಎಲ್ಲಾ ರೀತಿಯ ಪಾತ್ರಗಳಲ್ಲೂ ಪಳಗಿದ ಐಂದ್ರಿತಾ ಇದೀಗ ಸೀತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. 

ಕಳೆದ ಕೆಲ ತಿಂಗಳಿಂದ ಮುಂಬೈನಲ್ಲೇ ವಾಸವಾಗಿರುವ ಐಂದ್ರಿತಾ ರೈ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣ ನಡೆಯುತ್ತದೆ. ಅದಾಗಲೇ ಇನ್ನೊಂದು ಚಿತ್ರಕ್ಕೆ ಕಾಲ್ ಶೀಟ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮುಂಬೈನ ಬಿಸಿಲಿನ ಝಳಕ್ಕೆ ಐಂದ್ರಿತಾ ರೈ ತತ್ತರಿಸಿ ಹೋಗಿದ್ದಾರೆ. ಆದರೂ ತಮ್ಮ ಚಿತ್ರಕ್ಕಾಗಿ ಅದನ್ನು ಸಹಿಸಿಕೊಂಡಿದ್ದಾರೆ. 47 ಡಿಗ್ರಿ ಸೆಲ್ಷಿಯಸ್ ಉಷ್ಣಾಂಶದಲ್ಲೂ ಶೂಟಿಂಗ್ ಮಾಡ್ತಾ ಇರೋದು ಅದ್ಭುತವಾದ ಅನುಭವ. ಕುಚ್ ಗಡಿ ಭಾಗದಲ್ಲಿ ಚಿತ್ರೀಕರಣ ನಡೆಯುತ್ತಿದೆ. ನಾನು ನನ್ನ ಪಾತ್ರದಲ್ಲಿ ಕಳೆದು ಹೋಗಿದ್ದೇನೆ.  ನಡೆಯುವ ಶೈಲಿಯನ್ನು, ಮಾತನಾಡುವ ಶೈಲಿಯನ್ನು ಚೆಂಜ್ ಮಾಡಿಕೊಂಡಿದ್ದೇನೆ ಎಂದು ಐಂದಿತಾ ರೈ ತಮ್ಮ ಅನುಭವವನ್ನು ಬಿಚ್ಚಿಟ್ಟಿದ್ದಾರೆ. 

loader