ಇತ್ತೀಚೆಗೆ ಮೀ ಟೂ ಅಭಿಯಾನ ಹೆಚ್ಚು ಹೆಚ್ಚು ಸದ್ದು ಮಾಡುತ್ತಿದ್ದು ಇದೀಗ ಬಾಲಿವುಡ್ ನಿರ್ದೇಶಕರ ಕಾಮಪುರಾಣಗಳನ್ನು ಒಬ್ಬೊಬ್ಬರೇ ನಟಿಯರು ಬಿಚ್ಚಿಡುತ್ತಿದ್ದಾರೆ. ಇದೀಗ ಕ್ಷೀನ್ ನಿರ್ದೇಶಕನ ಬಗ್ಗೆ ಕಂಗನಾ ಬಳಿಕ ಇನ್ನೋರ್ವ ನಟಿ ಕೂಡ ಮಾಹಿತಿ ಹೊರಗೆಡವಿದ್ದಾರೆ.
ಮುಂಬೈ : ನಟರು ಹಾಗೂ ಗಣ್ಯ ವ್ಯಕ್ತಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಪರ್ವ ಮುಂದುವರೆದಿದೆ. ನಿರ್ದೇಶಕ ವಿಕಾಸ್ ಬಹಲ್ ಅವರು ತಮ್ಮ ಜತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಅವರು ನನ್ನನ್ನು ತಬ್ಬಿಕೊಳ್ಳುವ
ನೆಪದಲ್ಲಿ ನನ್ನ ಕೂದಲ ಸುವಾಸನೆಯನ್ನು ಮೂಸುತ್ತಿದ್ದರು ಎಂದು ನಟಿ ಕಂಗನಾ ರಾಣಾವತ್ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಇದೀಗ ಇನ್ನೋರ್ವ ನಟಿ ಕೂಡ ವಿಕಾಸ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ.
ತಮಗೆ ಕ್ಷೀನ್ ಚಿತ್ರದ ನಿರ್ದೇಶಕ ಒತ್ತಾಯಪೂರ್ವಕವಾಗಿ ಮುತ್ತುಕೊಡಲು ಯತ್ನಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ವಿಕಾಸ್ ಬಹಲ್ ಅವರದ್ದು ಅಪ್ರಮಾಣಿಕ ವ್ಯಕ್ತಿತ್ವ ಎಂದು ಆರೋಪಿಸಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಕೂಡ ಅವರೊಂದಿಗೆ ಒಂಟಿಯಾಗಿರಬಾರದು. ಅವರೊಂದಿಗೆ ಒಂಟಿಯಾಗಿರುವುದು ಅತ್ಯಂತ ಅಪಾಯಕಾರಿ ವಿಚಾರ ಎಂದು ಹೆಸರು ಹೇಳಲು ಇಚ್ಛಿಸದ ನಟಿ ಹೇಳಿದ್ದಾರೆ.
ಒಂದು ವೇಳೆ ಆತನ ವರ್ತನೆಯನ್ನು ನಾವು ನಿರ್ಲಕ್ಷ್ಯ ಮಾಡಿದಲ್ಲಿ ಆತ ಕುಡಿದಂತೆ ವರ್ತಿಸುತ್ತಿದ್ದ ಎಂದು ಮ್ಯಾಗಜಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆತ ನನಗೆ ಮುತ್ತು ಕೊಡಲು ಯತ್ನಿಸಿದ. ಆತನನ್ನು ನಾನು ದೂರಕ್ಕೆ ತಳ್ಳಿದ್ದೆ. ಆಗ ಅಲ್ಲಿ ಹೆಚ್ಚು ಜನರು ಇರಲಿಲ್ಲ ಎಂದು ಅವರು ಹೇಳಿದ್ದಾರೆ.
