ಮೇಘನಾ ರಾಜ್, ಸಂಯುಕ್ತ ಹೊರನಾಡು, ನಕ್ಷತ್ರ ಈ ಮೂವರ ಸಾಲಿನಲ್ಲಿ ಪ್ರಥಮ್ ವಿನಯಾ ಪ್ರಸಾದ್ ಕೂಡ ಇದ್ದಾರೆ.

ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮ್ ವಿನಯಾಪ್ರಸಾದ್ ನಾಯಕಿ ಆಗುತ್ತಿದ್ದಾರೆ. ಮುಸ್ಸಂಜೆ ಮಹೇಶ್ ನಿರ್ದೇಶಿಸಲಿರುವ ಹೊಸ ಚಿತ್ರದಲ್ಲಿ ನಾಲ್ಕು ಮಂದಿ ನಾಯಕಿಯರು ಇದ್ದಾರೆ. ಮೇಘನಾ ರಾಜ್, ಸಂಯುಕ್ತ ಹೊರನಾಡು, ನಕ್ಷತ್ರ ಈ ಮೂವರ ಸಾಲಿನಲ್ಲಿ ಪ್ರಥಮ್ ವಿನಯಾ ಪ್ರಸಾದ್ ಕೂಡ ಇದ್ದಾರೆ.

ಹಾಗೆ ನೋಡಿದರೆ ತಮ್ಮ ತಾಯಿ ನಿರ್ದೇಶಿಸಿ ನಿರ್ಮಿಸಿದ ‘ಲಕ್ಷ್ಮೀ ನಾರಾಯಣರ ಪ್ರಪಂಚನೇ ಬೇರೆ’ ಎನ್ನುವ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಅದಾದ ನಂತರ ಈಗ ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಇನ್ನೂ ಚಿತ್ರಕ್ಕೆ ಹೆಸರಿಟ್ಟಿಲ್ಲ. ನಾಲ್ಕು ನಾಯಕಿಯರ ಸಿನಿಮಾ ಇದಾಗಿರುವ ಕಾರಣ ಪ್ರಯೋಗದಿಂದ ಕೂಡಿರುತ್ತದೆ. ಜತೆಗೆ ಕಮರ್ಷಿಯಲ್ ಸಿನಿಮಾ ಕೂಡ ಹೌದು ಎಂಬುದು ಚಿತ್ರತಂಡದ ಮಾತು.