‘ದಿ ಫೈಟಿಂಗ್’ ಎನ್ನುವ ಟ್ಯಾಗ್ ಲೈನ್ ಒಳಗೊಂಡಿರುವ ಈ ಚಿತ್ರದ ನಿರ್ದೇಶಕ ಯಶಸ್ವಿ ಬಾಲಾದಿತ್ಯಾ ಅವರು. ಮೊದಲ ಚಿತ್ರವಾದರೂ ತಾವೇ ಕತೆ, ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಬಿ ಜಯಶ್ರೀ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರದ ಪೋಸ್ಟರ್ ಬಿಡುಗಡೆಯ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು.

ಇದು ಸಿನಿಮಾದೊಳಗೊಂದು ಸಿನಿಮಾ ಕತೆ ನಡೆಯುವ ಚಿತ್ರ. ಒಬ್ಬ ಕಲಾವಿದ ಕಷ್ಟಪಟ್ಟು ಒಂದು ಹಂತಕ್ಕೆ ಬಂದಾಗ ಆತನ ಪ್ರತಿಭೆ ಮತ್ತು ಕಲೆಯನ್ನು ಗುರುತಿಸಲಾಗುತ್ತದೆಯೋ ಇಲ್ಲವೋ? ಕಲಾವಿದ ತನ್ನನ್ನು ಗುರುತಿಸಿಕೊಳ್ಳಲು ಯಾವು ರೀತಿ ಪಯಣ ಆರಂಭಿಸುತ್ತಾನೆ. ಜತೆ ಆತನ ಎದುರಿಸುವ ಕಷ್ಟಗಳೇನು ಎಂಬುದನ್ನು ಹೇಳುವ ಸಿನಿಮಾ ಇದು. ಇಡೀ ಸಿನಿಮಾ ಸೆಸ್ಪನ್ಸ್, ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ.

 

ಇಂಥ ಚಿತ್ರದಲ್ಲಿ ಬಿ ಜಯಶ್ರೀ ಅವರು ಕೊರವಂಜಿ ಹೇಳುವ ಪಾತ್ರ ಮಾಡುತ್ತಿದ್ದಾರೆ. ನಟನೆ ಜತೆಗೆ ಒಂದು ಹಾಡಿಗೆ ಕಂಠದಾನ ಮಾಡಿದ್ದಾರೆ ಎಂಬುದು ವಿಶೇಷ. ‘ಹೊಸಬರು. ಹೊಸ ರೀತಿಯಲ್ಲಿ ಮಾಡಿರುವ ಸಿನಿಮಾ. ಎಲ್ಲರ ಪಾತ್ರಗಳು ಚೆನ್ನಾಗಿವೆ. ನನಗೆ ತಕ್ಕಂತ ಪಾತ್ರವನ್ನು ನಿರ್ದೇಶಕರು ಇಲ್ಲಿ ಕೊಟ್ಟಿದ್ದಾರೆ’ ಎಂದರು ಬಿ ಜಯಶ್ರೀ. ವಿಶೇಷ ಅಂದರೆ ಚಿತ್ರದ ಮತ್ತೊಂದು ಪಾತ್ರದಲ್ಲಿ ನಟಿ ಸುಧಾರಾಣಿ ಕಾಣಿಸಿಕೊಂಡಿದ್ದಾರೆ. ಅನಿಮೇಶನ್‌ನಲ್ಲಿ ಪರಣಿತರಾಗಿರುವ ಯಶಸ್ವಿ ಬಾಲಾದಿತ್ಯಾ ಅವರಿಗೆ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಪ್ರೇಕ್ಷ ಕರಿಗೆ ತಲುಪಿಸಬೇಕು ಎನ್ನುವ ಕನಸು ಇದೆ.

ಮೂಕಜ್ಜಿಯಾಗಿ ಜಯಶ್ರೀ

ಕಲಾವಿದನಾಗಬೇಕೆಂದು ಹೊರಡುವ ಪಾತ್ರದಲ್ಲಿ ಸುಜಿತ್‌ರಾಥೋಡ್ ಇದ್ದಾರೆ. ಇವರೇ ಚಿತ್ರದ ನಾಯಕ. ಇನ್ನೂ ಸುಧಾರಾಣಿ ಅವರದ್ದು ಡಾಕ್ಟರ್ ಪಾತ್ರ. ಜೀವನದ ಅರ್ಥ ತಿಳಿಸುವ ತಬಲಾನಾಣಿ, ನಟನಾಗಿ ದಿಲೀಪ್‌ರಾಜ್, ಮೇಧಾ, ಆದರ್ಶ್.ಎಚ್.ಎಸ್., ಅನುಷಾರಾವ್. ಮಹಂತೇಶ್ ತಾರಬಳಗದಲ್ಲಿ ಇದ್ದಾರೆ. ಎರಡು ಹಾಡುಗಳಿಗೆ ಚೇತನ್‌ಕುಮಾರ್ ಸಂಗೀತ ಇದೆ. ಛಾಯಾಗ್ರಹಣ ತನ್ವಿಕ್.ಜಿ ಅವರದ್ದು. ಪ್ರಜ್ವಲ್.ಎಂ.ರಾಜ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.