ಮದುವೆಯಲ್ಲಿ ಇಬ್ಬರು ಕುಟುಂಬದ ಕೆಲವರಿಗೆ ಮಾತ್ರ ಆಹ್ವಾನಿಸಲಾಗಿತ್ತು.
ಲವ್ ಇನ್ ಮಂಡ್ಯ, ಲೈಫು ಇಷ್ಟೇನೆ, ಡ್ರಾಮಾ, ಯಾರೆ ಕೂಗಾಡಲಿ ಮುಂತಾದ ಸಿನಿಮಾ'ಗಳಲ್ಲಿ ನಟಿಸಿದ್ದ ಕನ್ನಡದ ನಟಿ ಸಿಂಧು ಲೋಕ್'ನಾಥ್ ತಾವು ಪ್ರೀತಿಸುತ್ತಿದ್ದ ಬಹು ಕಾಲದ ಗೆಳೆಯ ಶ್ರೇಯಸ್ ಅವರೊಂದಿಗೆ ವಿವಾಹವಾಗಿದ್ದಾರೆ.
ಶ್ರೇಯಸ್ ಅವರನ್ನು ಸಿಂಧು 2 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆಗಸ್ಟ್ 27 ಭಾನುವಾರ ಮಡಿಕೇರಿಯ ಕಾವೇರಿ ಹಾಲ್'ನಲ್ಲಿ ಸಿಂಧು ಲೋಕ'ನಾಥ್ ವಿವಾಹವಾಗಿದ್ದಾರೆ. ಮದುವೆಯಲ್ಲಿ ಇಬ್ಬರು ಕುಟುಂಬದ ಕೆಲವರಿಗೆ ಮಾತ್ರ ಆಹ್ವಾನಿಸಲಾಗಿತ್ತು. ಶ್ರೇಯುಸ್ ಪೂಮಾ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಪಂಚಭಾಷಾ ನಟಿ ಪ್ರಿಯಾಮಣಿ ಕೂಡ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮುಂಬೈ ಉದ್ಯಮಿಯೊಂದಿಗೆ ವಿವಾಹವಾಗಿದ್ದರು.
