ಈ ನಟಿಗೆ ಬಿಕಿನಿಯೇ ಇಷ್ಟವಂತೆ!

Actress Shama Sikandar Likes Bikini
Highlights

ಏ ಮೇರಿ ಲೈಫ್ ಹೈ’ ಚಿತ್ರದ ನಾಯಕಿ ಶಮಾ ಸಿಕಂದರ್ ಕಳೆದ ಕೆಲವು ದಿನಗಳಿಂದ ದಿಢೀರ್ ಎಂದು ಸಖತ್ ಸುದ್ದಿಯಾಗಿಬಿಟ್ಟರು. ಅದಕ್ಕೆ  ಕಾರಣ ಅವರು ಹಾಕುತ್ತಿದ್ದ ಬಟ್ಟೆ. ತಾನು ಹಾಕುವ ಬಟ್ಟೆಯಿಂದ, ಸ್ಟೈಲ್‌ನಿಂದ ಸ್ಟಾರ್ ಆದವರು ನಮ್ಮ ನಡುವೆ ಸಾಕಷ್ಟಿದ್ದಾರೆ. ಈಗ ಆ ಲೀಸ್ಟ್‌ಗೆ ಅನಾಯಾಸವಾಗಿ ಶಮಾಳನ್ನು  ಸೇರಿಸಲಡ್ಡಿಯಿಲ್ಲ. 

ಕೆಲವು ದಿನಗಳ ಹಿಂದಷ್ಟೇ ರೆಡ್ ಬಿಕಿನಿ ತೊಟ್ಟು ಕಡಲ ತಡಿಯಲ್ಲಿ ಯೋಗ ಮಾಡುತ್ತಾ ಕುಳಿತ ಫೋಟೋ ಸಾಕಷ್ಟು ವೈರಲ್  ಆಗಿದ್ದಲ್ಲದೇ ವ್ಯಾಪಕ ಚರ್ಚೆಯನ್ನೂ ಹುಟ್ಟುಹಾಕಿತ್ತು. ಇದಾಗಿದ್ದೇ ತಡ ಶಮಾ ಏ ಮೇರಿ ಲೈಫ್ ಹೈ ಎನ್ನುವಂತೆ ಟಾಪ್‌ಲೆಸ್ ಫೋಟೋಶೂಟ್ ಮಾಡಿಸಿ ಮತ್ತೆ ಯುವ ಅಭಿಮಾನಿ ಪಡೆಯನ್ನು ಕಟ್ಟಿಕೊಂಡಳು. ಇಷ್ಟೆಲ್ಲಾ ಆದ ಮೇಲೆ ಶಮಾ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿತು. ಈಗ ತಾನು ಹಾಕುವ ಬಿಕಿನಿ, ಇಷ್ಟದ ಡ್ರೆಸ್‌ಗಳ ಬಗ್ಗೆ ಒಂದಷ್ಟು ಸ್ವಾರಸ್ಯಕರ ವಿಚಾರಗಳನ್ನು ಹೊರ ಹಾಕಿದ್ದಾಳೆ. ಅದೆಂದರೆ ‘ನನಗೆ ನಿಜವಾಗಿಯೂ ಹೆಚ್ಚು ಇಷ್ಟವಾಗುವುದು ಬಿಕಿನಿ. ಅದರಲ್ಲಿಯೂ ಕೆಂಪು, ಕಪ್ಪು, ಬಿಳಿ ಬಣ್ಣದ ಬಟ್ಟೆಗಳು ಜಾಸ್ತಿ ಆಕರ್ಷಣೆ ಮಾಡುತ್ತವೆ. ಬಿಕಿನಿ ಹಾಕಿದಾಗ ನನಗೆ ಖುಷಿಯಾಗುತ್ತದೆ. ಅದಕ್ಕೆ ಕೆಲವರು ವಿರೋಧ ಮಾಡುತ್ತಾರೆ. ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅದರ  ಅಗತ್ಯವೂ ನನಗೆ ಇಲ್ಲ’ ಎಂದಿದ್ದಾಳೆ. ಹಾಗಾಗಿ ಶಮಾಳನ್ನು ಬಿಕಿನಿಯಲ್ಲಿ  ನೋಡಲು ಬಯಸುವ ಅಭಿಮಾನಿಗಳು ಮುಂದೆಯೂ ಇನ್ನಷ್ಟು ಮೋಹಕ
ಚಿತ್ರಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು.

loader