ನಟಿ ಸಂಜನಾಗೆ ‘ಪ್ರಸಿದ್ಧಿ ಚಿಟ್ ಫಂಡ್​​’ ನಿಂದ 26 ಲಕ್ಷ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಈ ಕುರಿತಾಗಿ ನಟಿ ಸಂಜನಾ ಖುದ್ದಾಗಿ ಹೇಳಿಕೊಂಡಿದ್ದಾರೆ.

ಬೆಂಗಳೂರು(ಆ.19): ನಟಿ ಸಂಜನಾಗೆ ‘ಪ್ರಸಿದ್ಧಿ ಚಿಟ್ ಫಂಡ್​​’ ನಿಂದ 26 ಲಕ್ಷ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಈ ಕುರಿತಾಗಿ ನಟಿ ಸಂಜನಾ ಖುದ್ದಾಗಿ ಹೇಳಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​​ ನಟಿ ಸಂಜನಾಗೆ, ಚಿಟ್​ ಕಂಪನಿ ‘ಪ್ರಸಿದ್ಧಿ ಚಿಟ್ ಫಂಡ್​​’ 26 ಲಕ್ಷ ಮೋಸ ಮಾಡಿದೆ. ನಟಿ ಸಂಜನಾ ಸೇರಿದಂತೆ 150 ಜನರಿಗೆ ಒಟ್ಟು 16 ಕೋಟಿ ಪಂಗನಾಮ ಹಾಕಿರುವುದೂ ಇದೇ ವೇಳೆ ಬೆಳಕಿಗೆ ಬಂದಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧಿ ಚಿಟ್ ಫಂಡ್'ನ ಮಾಲೀಕರಾದ ಮಹೇಶ್, ಪತ್ನಿ ನಿರುಪಮಾ ವಿರುದ್ಧ ನಟಿ ಸಂಜನಾ ಈಗಾಗಲೇ ಮಲ್ಲೇಶ್ವರಂ ಠಾಣೆಗೆ ದೂರು ನೀಡಿದ್ದಾರೆ.