ಸಂಯುಕ್ತಾ ಹೆಗ್ಡೆ ಹಾಟ್ ಫೋಟೋ ಸಕತ್ ವೈರಲ್

entertainment | Saturday, June 2nd, 2018
Suvarna Web Desk
Highlights

ಕಾಂಟ್ರವರ್ಸಿ ಅಂದ್ರೆ ನಮ್ ಮನೆ ದೇವ್ರ ಎನ್ನುವ ಹಾಗಿದೆ ನಟಿ ಸಂಯುಕ್ತ ಹೆಗ್ಡೆ ಆ್ಯಟಿಟ್ಯೂಡ್. ಯಾಕಂದ್ರೆ, ಮತ್ತೆ ಸೋಷಲ್ ಮೀಡಿಯಾದಲ್ಲಿ ಟ್ರೋಲ್ ಹೈಕ್ಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಸಂಯುಕ್ತ ಹೆಗ್ಡೆ. ಒನ್ಸ್ ಏಗೇನ್ ಅವರ ತುಂಡುಡುಗೆಯ ಹಾಟ್ ಫೋಟೋಗಳು ಈಗ ಮತ್ತೆ ಹುಬ್ಬೇರಿಸುವಂತೆ ಮಾಡಿವೆ. 

ಬೆಂಗಳೂರು (ಜೂ. 02): ಕಾಂಟ್ರವರ್ಸಿ ಅಂದ್ರೆ ನಮ್ ಮನೆ ದೇವ್ರ ಎನ್ನುವ ಹಾಗಿದೆ ನಟಿ ಸಂಯುಕ್ತ ಹೆಗ್ಡೆ ಆ್ಯಟಿಟ್ಯೂಡ್. ಯಾಕಂದ್ರೆ, ಮತ್ತೆ ಸೋಷಲ್ ಮೀಡಿಯಾದಲ್ಲಿ ಟ್ರೋಲ್ ಹೈಕ್ಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಸಂಯುಕ್ತ ಹೆಗ್ಡೆ. ಒನ್ಸ್ ಏಗೇನ್ ಅವರ ತುಂಡುಡುಗೆಯ ಹಾಟ್ ಫೋಟೋಗಳು ಈಗ ಮತ್ತೆ ಹುಬ್ಬೇರಿಸುವಂತೆ ಮಾಡಿವೆ. 

ಫೇಸ್‌ಬುಕ್, ಇನ್ಸ್ಟಾಗ್ರಾಮ್, ಟ್ವಿಟರ್ ಸೇರಿದಂತೆ ಸೋಷಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿವೆ. ಇಷ್ಟಕ್ಕೂ ಇವು ಸೋಷಿಯಲ್ ಮೀಡಿಯಾ ಹೊಕ್ಕಿದ್ದು ಹೇಗೆ? ಅದು ಎಲ್ಲರನ್ನು ಕಾಡುವ ಯಕ್ಷ ಪ್ರಶ್ನೆ.
ಆದ್ರೆ, ಇವು ಇತ್ತೀಚೆಗಷ್ಟೇ ಸಂಯುಕ್ತ ಹೆಗ್ಡೆ ಮಾಡಿಸಿದ ಸ್ಪೆಷಲ್ ಫೋಟೋ ಶೂಟ್ ಝಲಕ್. ಸಂಯುಕ್ತ ಬೋಲ್ಡ್ ನಟಿ ಎನ್ನುವುದು ಎಲ್ಲರಿಗೂ ಗೊತ್ತಿತ್ತು, ಆದ್ರೆ ಇಷ್ಟು ಬೋಲ್ಡ್ ನಟಿ  ಅನ್ನೋದು ಗೊತ್ತಿರಲಿಲ್ಲ ಎನ್ನುವುದಕ್ಕೆ ಕನ್ನಡಿ ಹಿಡಿದಿವೆ ಈ ಫೋಟೋಗಳು.

ಮೂರ್ನಾಲ್ಕು ದಿನಗಳ ಹಿಂದೆ ಸಂಯುಕ್ತ ಹೆಗ್ಡೆ ಅವರ ಇನ್ ಸ್ಟಾಗ್ರಾಮ್ ಅಕೌಂಟ್‌ನಲ್ಲೇ ಒಂದೆರೆಡು ಫೋಟೋಗಳು ಕಾಣಿಸಿಕೊಂಡಿದ್ದವು. ಸದ್ಯಕ್ಕೆ ಅವು ಅಲ್ಲಿಲ್ಲ. ಆದ್ರೆ ಫೋಟೋಶೂಟ್‌ನ ಬಗೆ ಬಗೆಯ ಅಷ್ಟು ಭಾವಚಿತ್ರಗಳು ಈಗ ಸಾಮಾಜಿಕ ಜಾಲತಾಣದಲ್ಲಿವೆ. ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಎಲ್ಲಾ ಕಡೆ ಟ್ರೋಲ್ ಆಗಿವೆ. ಹಿಂದೊಮ್ಮೆಯೂ ಹೀಗೆಯೇ ಭಾಗಶಃ ಎದೆ ತೋರಿಸುವ ಹಾಟ್ ಫೋಟೋಗಳನ್ನು ಫೇಸ್‌ಬುಕ್‌ನ ತಮ್ಮದೇ ಅಕೌಂಟ್‌ನಲ್ಲಿ ಹಾಕಿಕೊಂಡು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು ಸಂಯುಕ್ತ. ಈಗ ಅಂಥದ್ದೇ ಹಂಗಾಮ ರಿಪೀಟ್ ಆಗಿದೆ.

ಹಾಗಂತ, ಕಿರಿಕ್ ಆಗಲಿ, ಕಾಂಟ್ರವರ್ಸಿಯಾಗಲಿ ಅವರಿಗೆ ಹೊಸದಲ್ಲ.‘ಕಿರಿಕ್ ಪಾರ್ಟಿ’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಬಂದ ಸಂಯುಕ್ತ ಹೆಗಡೆ ಬಹುಬೇಗ ತಾನೂ ‘ಕಿರಿಕ್ ಕ್ಯಾರೆಕ್ಟರ್’ ಅನ್ನೋದನ್ನು ಸಾಬೀತು ಮಾಡಿದರು. ‘ಕಾಲೇಜು ಕುಮಾರ’ ಚಿತ್ರದ ವಿವಾದ ದೊಡ್ಡ ರಾದ್ಧಾಂತ ಎಬ್ಬಿಸಿತು. ಅದಾಗಿ ಇನ್ನೇನು ಸರಿ ಹೋದ್ರು ಎನ್ನುವಾಗ ತಮ್ಮದೇ ಫೇಸ್‌ಬುಕ್ ಅಕೌಂಟ್‌ನಲ್ಲಿ ಹಾಕಿಕೊಂಡಿದ್ದ ಭಾಗಶಃ ಎದೆ ತೋರಿಸುವ ಹಾಟ್ ಫೋಟೋವೊಂದು ಸೋಷಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಯಿತು. ಕೊನೆಗೆ ಸಂಯುಕ್ತ ತಮ್ಮ ಫೇಸ್‌ಬುಕ್ ಅಕೌಂಟ್‌ನಿಂದ ಆ ಫೋಟೋವನ್ನು ರಿಮೂವ್ ಮಾಡಿದರು.

ಆ ಹೊತ್ತಿಗಾಗಲೇ ಟ್ರೋಲ್ ಹೈಕ್ಳ ಕೆಂಗಣ್ಣಿಗೆ ಸಿಲುಕಿ, ಹೈರಾಣಾಗಿದ್ದರು. ದಾರಿ ತೋರದೆ, ಅನಿವಾರ್ಯವೇ ಎನ್ನುವ ಹಾಗೆ ಫೋಟೋ ರಿಮೂವ್ ಮಾಡಿ, ವಿವಾದದಿಂದ ಬಚಾವ್ ಆದ್ರು. ಅಷ್ಟಾದ್ರು ಬುದ್ಧಿ ಬರಲಿಲ್ವಾ? ಈಗ ಟ್ರೋಲ್ ಹೈಕ್ಳು ಸಂಯುಕ್ತಗೆ ಕೇಳುತ್ತಿರುವ ಪ್ರಶ್ನೆ. ಯಾಕಂದ್ರೆ, ಮತ್ತದೇ ತುಂಡುಗೆಯ ಹಾಟ್ ಫೋಟೋಗಳು. ಸೋಷಲ್ ಮೀಡಿಯಾದಲ್ಲಿ ಅವೇ ಈಗ ವೈರಲ್. ವಿಚಿತ್ರ ಅಂದ್ರೆ, ನಟಿಯಾಗಿ ಸಿನಿಮಾದಲ್ಲಿ ಸುದ್ದಿ ಆಗುವ ಬದಲಿಗೆ ಅನಗತ್ಯ ಕಾಂಟ್ರವರ್ಸಿಗಳಲ್ಲೇ ದೊಡ್ಡ ಸುದ್ದಿ ಆಗುತ್ತಿದ್ದಾರೆ ಸಂಯುಕ್ತ.

ಸಿನಿಮಾದ ಅವಕಾಶಗಳು ಇಲ್ಲದಿರುವುದು ಅದಕ್ಕೆ ಕಾರಣವಿರಬಹುದು ಎನ್ನುವ ಮಾತುಗಳು ಇವೆ. ಸಂಯುಕ್ತ ಸದ್ಯದ ಸ್ಥಿತಿ ನೋಡಿದ್ರೆ ಅದು ನಿಜವೂ ಹೌದು. ‘ತುರ್ತು ನಿರ್ಗಮನ’ ಹೆಸರಿನ ಚಿತ್ರವೊಂದನ್ನು ಬಿಟ್ಟರೆ ಅವರ ಕೈಯಲ್ಲೀಗ ಒಂದಕ್ಕಿಂತ ಹೆಚ್ಚು ಸಿನಿಮಾ ಇಲ್ಲ. ‘ಕಾಲೇಜು ಕುಮಾರ’ ಬಂದು ಹೋದ ನಂತರ ಬಹುತೇಕ ಖಾಲಿ ಕುಳಿತಿದ್ದಾರೆ. ತೆಲುಗಿನಲ್ಲೂ ‘ಕಿರಿಕ್ ಪಾರ್ಟಿ’ಗೆ ಹೋಗಿ ಬಂದಿದ್ದೇ ದೊಡ್ಡ ಸಾಹಸ ಎಂದುಕೊಂಡಿದ್ದಾರೆ. ಇಂತಹ ವಿವಾದಗಳಲ್ಲಿ ಸುದ್ದಿ ಆಗುವುದೇ ಅವರ ಕೆಲಸವಾಗಿದೆ ಎನ್ನುವ ಟೀಕೆಗಳಿಗೂ ಗುರಿಯಾಗಿದ್ದಾರೆ ಸಂಯುಕ್ತಾ ಹೆಗಡೆ. 

Comments 0
Add Comment

  Related Posts

  Ramya another Controversy

  video | Sunday, April 8th, 2018

  Jaggesh reaction about Controversy

  video | Saturday, April 7th, 2018

  MLA Bhava Song Controversy

  video | Friday, March 9th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Shrilakshmi Shri