ವಿರಾಟ್ ಕೊಯ್ಲಿ-ಅನುಷ್ಕಾ ಶರ್ಮಾ, ಯುವರಾಜ್, ಸಿಂಗ್-ಅಜೆಲ್, ಹರ್ಬಜನ್ ಸಿಂಗ್-ಗೀತಾ ಬಸ್ರಾ...ಸಾಲಿಗೆ ಸೇರುತ್ತದೆ ಎಂದುಕೊಂಡಿದ್ದ ಜೋಡಿ ಬೇರೆ ಬೇರೆಯಾಗಿದೆ. ಅದುವೇ ಹಾರ್ದಿಕ್ ಪಾಂಡ್ಯಾ ಮತ್ತು ಎಲಿ ಅವ್ರಹಾಂ ಒಟ್ಟಾಗಿ ತಿರುಗುತ್ತಿದ್ದಾರೆ ಎಂಬ ಸುದ್ದಿಗೆ ಸ್ವತಃ ಎಲಿ ಅವ್ರಹಾಂ ಅವರೆ ಉತ್ತರ ನೀಡಿದ್ದಾರೆ.
ಮುಂಬೈ[ಫೆ.16] ಕಳೆದ ವರ್ಷವೇ ಹಾರ್ದಿಕ್ ಪಾಂಡ್ಯಾಗೆ ಬಾಲಿವುಡ್ ನಟಿಯೊಂದಿಗೆ ಲವ್ ಆಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪರಿಣಿತಿ ಚೋಪ್ರಾ ಸ್ವಲ್ಪ ಸುಳಿವು ನೀಡಿದ್ದರೂ ಕೂಡ. ಅದಕ್ಕೆ ಉತ್ತರವೆಂಬಂತೆ ಹಾರ್ದಿಕ್ ಕೂಡ ಹೌದು ಎನ್ನುವ ಹಾಗೆ ನಡೆದುಕೊಂಡಿದ್ದರು. ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದರು.
ಕಾಮೋತ್ತೇಜಕ ಹೇಳಿಕೆ ಪಾಂಡ್ಯಗೆ ತಂದ ಸಂಕಷ್ಟ
ಕೃನಾಲ್ ಪಾಂಡ್ಯ ಮದುವೆ ವೇಳೆಯೂ ಓಡಾಡಿಕೊಂಡಿದ್ದ ನಟಿ ಇದೀಗ ಮೌನ ಮುರಿದಿದ್ದಾರೆ. ಕಾಫಿ ವಿತ್ ಕರಣ್ ಶೋ ನಲ್ಲಿ ನಡೆದ ಅವಾಂತರದ ನಂತರದ ಬೆಳವಣಿಗೆ ಇದು ಎಂದು ಭಾವಿಸಿದರೆ ಏನು ಮಾಡಲು ಸಾಧ್ಯವಿಲ್ಲ. ಆದರೆ ಈಗ ನಟಿ ಪಾಂಡ್ಯರಿಂದ ದೂರವಾಗಿದ್ದಾರೆ.
ಇದು ತುಂಬಾ ಹಳೆಯ ಮತ್ತು ಮುಗಿದು ಹೋದ ಕತೆ. ಹಾರ್ದಿಕ್ ಅವರೊಂದಿಗೆ ನಾನು ಓಡಾಡುತ್ತಿಲ್ಲ. ಇನ್ನು ಮದುವೆ ಮಾತು ಬಿಡಿ. ಈ ಬಗೆಯ ಸುದ್ದಿ ಸೃಷ್ಟಿ ಮಾಡಿದವರಿಗೆ ನಾಚಿಕೆ ಆಗಬೇಕು ಎಂದಿದ್ದಾರೆ.
