ಸಿನಿಮಾ ತಾರೆಯರಿಗೂ ಹಾಗೂ ಕ್ರಿಕೆಟರ್ಸ್ ಪ್ರೀತಿ, ಪ್ರೇಮ ಸಹಜ. ಅದೇ ಸಾಲಿಗೆ ಇನ್ನೊಂದು ಲವ್ ಸ್ಟೋರಿ ಸೇರ್ಪಡೆಯಾಗಿದೆ. 

ನಟ ಸಾರ್ವಭೌಮ ನಟಿ ಅನುಪಮಾ ಹಾಗೂ ಕ್ರಿಕೆಟರ್ ಜಸ್ಟ್ರಿತ್ ಬೂಮ್ರಾ ನಡುವೆ ಕುಚ್ ಕುಚ್ ಶುರುವಾಗಿದೆ ಎನ್ನುವ ಚರ್ಚೆ ಶುರುವಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. 

ವಾಸ ಮಾಡಲು ಬಾಡಿಗೆ ಮನೆ ಸಿಗದೆ ಪರದಾಡಿದ ನಟಿ!

ಅನುಪಮಾ ಸೌತ್ ಇಂಡಸ್ಟ್ರಿ ಸ್ಟಾರ್ ನಟಿ. ಬೂಮ್ರ ಗುಜರಾತ್ ಮೂಲದರು. ದಕ್ಷಿಣ ಭಾರತಕ್ಕೂ , ಉತ್ತರ ಭಾರತಕ್ಕೂ ಹೇಗೆ ಲಿಂಕಾಯ್ತು ಎಂದು ಯೋಚಿಸ್ತಿದ್ದೀರಾ? ಈ ಸುದ್ದಿ ಓದಿ. 

ಇಬ್ಬರ ನಡುವಿನ ಪ್ರೀತಿ ವಿಚಾರ ಬಹಿರಂಗವಾಗಿದ್ದು ಟ್ವಿಟರ್ ನಲ್ಲಿ. ಟ್ವಿಟರ್ ನಲ್ಲಿ ಬೂಮ್ರಾ ಕೇವಲ 25 ಮಂದಿಯನ್ನು ಮಾತ್ರ ಫಾಲೋ ಮಾಡ್ತಾ ಇದ್ದಾರೆ. ಅದರಲ್ಲಿ ಅನುಪಮಾ ಅವರೂ ಒಬ್ಬರು. ಅಷ್ಟೇ ಆಗಿದ್ರೆ ಸುಮ್ಮನಾಗಬಹುದಿತ್ತು. ಆದರೆ ಲೈಕ್ ಒತ್ತಿ, ಶೇರ್ ಕೂಡಾ ಮಾಡುತ್ತಿದ್ದಾರೆ. ಇದು ಅನುಮಾನಗಳಿಗೆ ಕಾರಣವಾಗಿದೆ. 

ಅನುಪಮಾ ಮಲಯಾಳಂನ ಪ್ರೇಮಂ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ನಟ ಸಾರ್ವಭೌಮ ಮೂಲಕ ಕನ್ನಡಿಗರ ಮುಂದೆ ಬಂದಿದ್ದಾರೆ.