ಗಂಡ ದಿಗಂತ್ ಅವರೊಂದಿಗೆ ಪೋಟೋ ಶೇರ್ ಮಾಡಿ ಸುದ್ದಿ ಮಾಡುತ್ತಿದ್ದ ನಟಿ ಐಂದ್ರಿತಾ ರೇ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ.ಐಂದ್ರಿತಾ ವೆಬ್‌ ಸರಣಿ ಲೋಕಕ್ಕೆ  ಕಾಲಿಟ್ಟಿದ್ದಾರೆ. ಆ ಮೂಲಕ ಡಿಜಿಟಲ್‌ ಕ್ಷೇತ್ರದಲ್ಲೂ ಅಭಿಮಾನಿಗಳಿಗೆ ಮನರಂಜನೆ ನೀಡಲು ತಯಾರಿ ನಡೆಸಿದ್ದಾರೆ.

 ಗ್ಲಾಮರ್ ಬೊಂಬೆ  ಐಂದ್ರಿತಾ ರೇ ಜೀ 5  ನಲ್ಲಿ ಪ್ರಸಾರವಾಗುವ ದಿ ಕ್ಯಾಸಿನೋ ಎಂಬ ವೆಬ್ ಸಿರೀಸ್ ನಲ್ಲಿ ನಟಿಸುತ್ತಿದ್ದಾರೆ. ಹಾರ್ದಿಕ್ ಗಜ್ಜಾರ್ ದಿ ಕ್ಯಾಸಿನೋ ಮೈ ಗೇಮ್ ಮೈ ರೂಲ್ಸ್  ವೆಬ್ ಸಿರೀಸ್  ನಿರ್ದೇಶನ ಮಾಡುತ್ತಿದ್ದಾರೆ, ಈ ವೆಬ್ ಸಿರೀಸ್ ನಲ್ಲಿ ಐಂದ್ರಿತಾ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ.

ಬಿಕಿನಿಗೆ ಬಂದ ಐಂದ್ರಿತಾ..ಅಬ್ಬಬ್ಬಾ ಎಂಥಾ ಲುಕ್

ಇವರ ಜೊತೆಗೆ ಕರ್ನವೀರ್ ಬೊಹ್ರಾ, ಸುದಾಂಶು ಪಾಂಡೆ ಮತ್ತು ಮಂದಾನ ಕರಿಮಿ ಕೂಡ ನಟಿಸಿದ್ದಾರೆ. 10 ಎಪಿಸೋಡ್ ಗಳು ಇರಲಿದ್ದು ಸಸ್ಪೆನ್ಸ್ ಥ್ರಿಲ್ಲರ್ ಕತೆ ಆಧಾರ.

ಈಗಾಗಲೇ ಒಂದು ತಿಂಗಳ ಶೂಟಿಂಗ್ ಮುಗಿದಿದ್ದು ನೇಪಾಳದಲ್ಲಿ ಶೂಟಿಂಗ್ ಮುಂದುವರಿದಿದೆ.