ಮುಂಬೈ[ಡಿ.14]: ಹಿಂದಿ ಕಿರುತೆರೆಯ ಪ್ರಸಿದ್ಧ ನಟಿ ಅದಿತಿ ಗುಪ್ತಾರವರು ತಮ್ಮ ಬಾಯ್ ಫ್ರೆಂಡ್, ಉದ್ಯಮಿ ಕಬೀರ್ ಚೋಪ್ರಾರೊಂದಿಗೆ ಡಿ.12 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಈ ಮದುವೆ ಸಂಭ್ರಮದಲ್ಲಿ ಕಿರುತೆರೆಯ ಹಲವಾರು ನಟಿಯರು ಪಾಲ್ಗೊಂಡಿದ್ದರು. ಅದರಲ್ಲೂ ವಿಶೇಷವಾಗಿ ನಟಿಯರಾದ ದೃಷ್ಟಿ ದಾಮೀ, ಅನಿತಾ ಹಸ್ ನಂದನೀ, ಕೃತಿಕಾ ಕಾಮ್ರಾ, ಪೂಜಾ ಗೌರ್ ಹಾಗೂ ಕ್ರಿಸ್ಟಲ್ ಡಿ’ಸೋಜಾ ಎಲ್ಲರ ಗಮನಸೆಳೆದರು.

ಅತ್ತ ಮದುಮಗನ ಶೂ ಕದಿಯುವ ಸಂಫ್ರದಾಯವನ್ನು ದೃಷ್ಟಿ ಧಾಮೀ ಹಾಗೂ ಪೂಜಾ ಗೌರ್ ನಿಭಾಯಿಸಿದರು. ಇನ್ನು ಮದುಮಗಳು ಅದಿತಿ ತಿಳಿ ಹಳದಿ ಬಣ್ಣದ ಲೆಹೆಂಗಾದಲ್ಲಿ ಕಂಗೊಳಿಸಿದರೆ ಮದುವೆ ಗಂಡು ಕಬೀರ್ ಚೋಪ್ರಾ ಸಿಲ್ವರ್ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದರು.

 
 
 
 
 
 
 
 
 
 
 
 
 

Cutiees 😘🤗 @additigupta @kkamra #bff #friendshipgoals #additigupta #Wedding

A post shared by Nikita (@love_harshiti) on Dec 13, 2018 at 6:47am PST

ಕೇವಲ ಮದುವೆ ಕಾರ್ಯಕ್ರಮವಷ್ಟೇ ಅಲ್ಲದೇ ಇವರ ನಿಶ್ಚಿತಾರ್ಥ ಹಾಗೂ ರಿಸೆಪ್ಶನ್ ಫೋಟೋಗಳೂ ವೈರಲ್ ಆಗಿವೆ.